ಮಂಗಳೂರು, ಜ. 30 (DaijiworldNews/SM): ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜನವರಿ 30 ರ ಶನಿವಾರ ಏರ್ ಇಂಡಿಯಾ ಫ್ಲೈಟ್ ಐಎಕ್ಸ್ 1814 ನಲ್ಲಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಓರ್ವ ಪ್ರಯಾಣಿಕನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಕೇರಳದ ಕಾಸರಗೋಡು ಮೂಲದ ಮಷ್ಕೂರ್ ಕಲ್ಲಾರ್ ಎಂದು ಗುರುತಿಸಲಾಗಿದೆ. ಪ್ರೊಫೈಲಿಂಗ್ ಮತ್ತು ವೈಯಕ್ತಿಕ ಹುಡುಕಾಟದ ಸಂದರ್ಭ ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿದೆ.
ಪ್ರಯಾಣಿಕನು ತನ್ನ ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಮರೆಮಾಚಿರುವುದು ಕಂಡುಬಂದಿದೆ. 30 ಲಕ್ಷ (ಅಂದಾಜು) ಮೌಲ್ಯದ 24 ಕೆ. ಶುದ್ಧತೆಯ 0.587 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲಾಗಿದೆ.