ಬಂಟ್ವಾಳ, ಜ. 30 (DaijiworldNews/SM): ಬಹುಗ್ರಾಮ ಕುಡಿಯುವ ನೀರಿನ ಘಟಕ ವೀಕ್ಷಣೆಗೆ ತೆರಳಿದ್ದ ಮಾಜಿ ಸಚಿವ ರಮಾನಾಥ ರೈ ಅವರಿಗೆ ಅಡ್ಡಿ ಪಡಿಸಿದ ಹಿನ್ನೆಲೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿರಿವ ಘಟನೆ ಬಂಟ್ವಾಳದ ಸರಪಾಡಿಯಲ್ಲಿ ನಡೆದಿದೆ.
ರವಿವಾರದಂದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಘಟನೆ ಲೋಕಾರ್ಪಣೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ವೀಕ್ಷಣೆಗೆಂದು ಮಾಜಿ ಸಚಿವ ರಮಾನಾಥ ರೈ ತೆರಳಿದ್ದರು. ಈ ಸಂದರ್ಭದಲ್ಲಿ ಸ್ಥಳದಲ್ಲಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದ್ದಾರೆ. ಹಾಗೂ ಧಿಕ್ಕಾರ ಕೂಗಿ ರಮಾನಾಥ ರೈ ಅವರಿಗೆ ಯೋಜನೆ ವೀಕ್ಷಣೆಗೆ ಅಡ್ಡಿಪಡಿಸಿದ್ದಾರೆ.
ಇನ್ನು ರಮಾನಾಥ ರೈ ಸಚಿವರಾಗಿದ್ದ ಸಂದರ್ಭದಲ್ಲಿ ಸುಮಾರು 33.15 ಕೋಟು ರೂಪಾಯಿ ಅನುದಾನವನ್ನು ಯೋಜನೆಗೆ ಮಂಜೂರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಯೋಜನೆ ಲೋಕಾರ್ಪಣೆಗೊಳ್ಳುತ್ತಿದ್ದ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ ನೇತೃತ್ವದ ತಂಡ ಯೋಜನೆ ವೀಕ್ಷಣೆಗೆ ತೆರಳಿತ್ತು. ಆದರೆ, ಘಟಕದೊಳಗೆ ತೆರಳಲು ಪೊಲೀಸ್ ಸಿಬ್ಬಂದಿಗಳು ಅವಕಾಶ ನೀಡಿಲ್ಲ.
ಇನ್ನು ತನ್ನ ಅವಧಿಯಲ್ಲಿ ಯೋಜನೆಗೆ ಅನುದಾನ ಮಂಜೂರುಗೊಳಿಸಿದ್ದು, ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ ನೀಡದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.