ಮಂಗಳೂರು, ಜ.30 (DaijiworldNews/HR): "ಮಹಾರಾಷ್ಟ್ರ ಸರಕಾರ ಮನೆಯೊಂದು ಮೂರು ಬಾಗಲಿನಂತಿದೆ ಹಾಗಾಗಿ ಜನರ ದೃಷ್ಟಿ ಬೇರೆಡೆ ಸೆಳೆಯಲು ಕರ್ನಾಟಕದ ಭಾಗಗಳ ಬಗ್ಗೆ ಅಲ್ಲಿನ ಮುಖ್ಯಮಂತ್ರಿ ಉದ್ಬವ್ ಠಾಕ್ರೆ ಮಾತನ್ನಾಡುತ್ತಿದ್ದಾರೆ" ಎಂದು ಉಪಮುಖ್ಯ ಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದಟತನದ ಹೇಳಿಕೆ ಖಂಡನೀಯವಾಗಿದ್ದು, ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ" ಎಂದರು.
"ಮಹಾರಾಷ್ಟ್ರಕ್ಕೆ ಕಾರವಾರ, ಅಥಣಿ, ಬೆಳಗಾವಿ ಸೇರ್ಪಡೆ ಮಾಡಬೇಕು ಎಂಬ ಹೇಳಿಕೆ ಉದ್ದಟತನದ್ಸು, ಇಲ್ಲಿ ಮರಾಠಿಗರು ಹೆಚ್ಚಾಗಿದ್ದಾರೆ ಎಂಬ ಮಾತ್ರಕ್ಕೆ ಮಹಾರಾಷ್ಟ್ರಕ್ಕೆ ಸೇರಿಸುವುದಕ್ಕೆ ಆಗುವುದಿಲ್ಲ. ಮುಂಬೈಯಲ್ಲಿ ಕೂಡ ಹೆಚ್ಚು ಕನ್ನಡಿಗರಿದ್ದಾರೆ, ಅದನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಿ ಎಂದು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.
ಇನ್ನು "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಮಾತೇ ಇಲ್ಲ. ಅವರು ಇಂತಹ ಹೇಳಿಕೆ ಕೊಡುವ ಮೊದಲು ಸರಿಯಾಗಿ ಯೋಚನೆ ಮಾಡಿ ಮಾತನಾಡಬೇಕು" ಎಂದರು.