ಬೆಂಗಳೂರು, ಜ.30 (DaijiworldNews/MB) : ''ಬಿಜೆಪಿಯು ಮನೆಯೊಂದು ನೂರು ಬಾಗಿಲು ಎನ್ನುವಂತೆ ಆಗಿದ್ದು ಅಲ್ಲಿ ಜನ ನಿಷ್ಠರು ಯಾರೂ ಇಲ್ಲ'' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊಂದಿರುವ ಪಕ್ಷ ಮತ್ತು ಸಂಘ ನಿಷ್ಠರು ಎಂದು ಎನಿಸಿಕೊಂಡಿರುವ 15 ಮಂದಿ ವಿಧಾನಮಂಡಲ ಕಲಾಪದ ಸಂದರ್ಭವೇ ಪ್ರತ್ಯೇಕ ಸಭೆ ನಡೆಸಲು ಸಿದ್ದತೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಒಂದೆಡೆ ಸರ್ಕಾರದಲ್ಲಿ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಲೂಟಿ ಬಲು ಜೋರು. ಮತ್ತೊಂದೆಡೆ ಬಿಎಸ್ವೈ ಮುಕ್ತ ಬಿಜೆಪಿ ಅಭಿಯಾನ ಬಲು ಜೋರು. ಮನೆಯೊಂದು ನೂರು ಬಾಗಿಲು ಎನ್ನುವಂತಾಗಿರುವ ಬಿಜೆಪಿಯಲ್ಲಿ ವ್ಯಕ್ತಿ ನಿಷ್ಠರು, ಸಂಘ ನಿಷ್ಠರು, ಪಕ್ಷ ನಿಷ್ಠರು ಎಲ್ಲರೂ ಇದ್ದಾರೆ, ಆದರೆ 'ಜನ ನಿಷ್ಠರು' ಒಬ್ಬರೂ ಇಲ್ಲವಲ್ಲ ಕರ್ನಾಟಕ ಬಿಜೆಪಿಗರೇ? ಜನರನ್ನು ಕೇಳುವವರಾರು?'' ಎಂದು ಪ್ರಶ್ನಿಸಿದ್ದಾರೆ.