ಹೈದರಾಬಾದ್, ಜ.30 (DaijiworldNews/MB) : ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ನಾಥೂರಾಮ್ ಗೋಡ್ಸೆ ಗುಂಡಿಕ್ಕಿ ಕೊಂದು ಇಂದಿಗೆ 73 ವರ್ಷಗಳಾಗಿದ್ದು ಈ ದಿನವನ್ನು ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ನಡುವೆ ''ನಾಥೂರಾಮ್ ಗೋಡ್ಸೆ ಓರ್ವ ಹೇಡಿ, ಭಯೋತ್ಪಾದಕ, ಕೊಲೆಗಾರ'' ಎಂದು ಖ್ಯಾತ ಬಹುಭಾಷಾ ನಟ ಸಿದ್ಧಾರ್ಥ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ, "ನಾಥೂರಾಮ್ ಗೋಡ್ಸೆ ಓರ್ವ ಹೇಡಿ, ಭಯೋತ್ಪಾದಕ, ಆರ್ಎಸ್ಎಸ್ನವ ಮತ್ತು ಓರ್ವ ಕೊಲೆಗಾರ. ಗೋಡ್ಸೆಯ ನೆನಪು ಮತ್ತು ಆತನ ಹೆಸರು ಭಾರತೀಯರು ತೀವ್ರ ನಾಚಿಕೆಪಡುವಂತದ್ದು. ಗಾಂಧೀಜಿ ಅಮರ್ ರಹೇ'' ಎಂದಿದ್ದಾರೆ.
ಇನ್ನು ಏತನ್ಮಧ್ಯೆ ಟ್ವಿಟರ್ನಲ್ಲಿ ಮಹಾತ್ಮ ಗಾಂಧಿ ಹೆಸರ ಜೊತೆ ನಾಥೂರಾಮ್ ಗೋಡ್ಸೆಯ ಹೆಸರು ಕೂಡಾ ಟ್ರೆಂಡಿಂಗ್ ಆಗಿದೆ.