ಬೆಂಗಳೂರು, ಜ.30 (DaijiworldNews/MB) : ''ದೇಶವನ್ನು ರಾಜಕೀಯ ದಾಸ್ಯದಿಂದ ಮುಕ್ತಿಗೊಳಿಸಿದವರು ಮಹಾತ್ಮ ಗಾಂಧಿಯವರು. ನಾವು ಅವರು ಪ್ರತಿಪಾದಿಸಿದ ತತ್ವ, ಸಿದ್ದಾಂತವನ್ನು ಪಾಲನೆ ಮಾಡಬೇಕು'' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಹಾತ್ಮ ಗಾಂಧಿ ಹುತಾತ್ಮ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಶನಿವಾರ ಎರಡು ನಿಮಿಷಗಳ ಕಾಲ ಮೌನಾಚರಣೆ ಬಳಿಕ ಮಾತನಾಡಿದ ಅವರು, ''ದೇಶದಾದ್ಯಂತ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಮಾಡಿಕೊಳ್ಳುವ ಕಾರ್ಯಕ್ರಮವಿದು. ನಾವು ಸಚಿವರು ಸೇರಿ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಭಾವನೆಗಳನ್ನು ವ್ಯಕ್ತಪಡಿಸಿದ್ದೇವೆ'' ಎಂದು ಹೇಳಿದರು.
''ಸ್ವಾವಲಂಬನೆ ಜೀವನ ತೋರಿಸಿಕೊಟ್ಟವರು ಗಾಂಧೀಜಿ. ನಾವು ಅವರ ಸಿದ್ದಾಂತದ ಪಾಲನೆ ಮಾಡಬೇಕು'' ಎಂದರು.
ಕಂದಾಯ ಸಚಿವ ಆರ್. ಅಶೋಕ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.