ಮಂಗಳೂರು, ಜ.30 (DaijiworldNews/MB) : ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 73ನೇ ಪುಣ್ಯತಿಥಿಯ ಆಚರಣೆ ಮಾಡಲಾಯಿತು. ಈ ವೇಳೆ ವಿಧಾನ ಪರಿಷತ್ನ ಮಾಜಿ ಸದಸ್ಯ ಐವನ್ ಡಿಸೋಜಾ ಅವರು ಬಿಜೆಪಿಯ ಕಾಲೆಳೆದಿದ್ದಾರೆ.
''ಬಿಜೆಪಿಯು ಮಹಾತ್ಮ ಗಾಂಧೀಜಿಯ ಪುಣ್ಯ ತಿಥಿಯನ್ನು ಆಚರಣೆ ಮಾಡುವುದಿಲ್ಲ. ಆದರೆ ಕಾಂಗ್ರೆಸ್ ತಿಥಿಯನ್ನು ಆಚರಣೆ ಮಾಡುವ ಪಕ್ಷ ಎಂದು ದೂರುತ್ತಾರೆ. ಗಾಂಧೀಜಿ ರೈತ ಪರ ದೇಶ ಮತ್ತು ಗ್ರಾಮ ಅಭಿವೃದ್ಧಿಗಾಗಿ ಹೋರಾಡಿದವರು. ಆದರೆ ಈಗ ಬಿಜೆಪಿ ಅವೆಲ್ಲವನ್ನು ಮುರಿದು ಹಾಕುತ್ತಿದೆ'' ಎಂದು ದೂರಿದರು.
''ರೈತರ ಪ್ರತಿಭಟನೆ ಸಂದರ್ಭ ಕೆಂಪು ಕೋಟೆಗೆ ದಾಳಿ ಆಗಿದೆ. ಕೆಂಪುಕೋಟೆಯಲ್ಲಿ ಬಿಜೆಪಿಯ ಕಾರ್ಯಕರ್ತನೇ ಬೇರೆ ಬಾವುಟ ಹಾರಿಸಿದ್ದಾನೆ. ಇದನ್ನು ಬಿಜೆಪಿಯೂ ನೋಡಿದೆ'' ಎಂದು ಹೇಳಿ ಬಿಜೆಪಿಯ ಕಾಲೆಳೆದಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಎಐಸಿಸಿಯ ಕೇರಳ ಉಸ್ತುವಾರಿಯಾಗಿ ಆಯ್ಕೆಯಾಗಿರುವ ಐವನ್ ಡಿಸೋಜಾರವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.