ಬೆಂಗಳೂರು, ಜ.30 (DaijiworldNews/PY): ಸಂಸತ್ತಿನ ಜಂಟಿ ಅಧಿವೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ಅವರು ಮಾಡಿದ್ದ ಭಾಷಣದ ವಿರುದ್ದ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅವರು, "ರಾಷ್ಟ್ರಪತಿಯವರು ಸರ್ಕಾರ ಬರೆದುಕೊಟ್ಟ ಹಸಿ ಹಸಿ ಸುಳ್ಳನ್ನು ಸಂಸತ್ತಿನಲ್ಲಿ ಹೇಳಿದ್ದಾರೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರಾಷ್ಟ್ರಪತಿಯವರು ಸರ್ಕಾರ ಬರೆದುಕೊಟ್ಟ ಹಸಿ ಹಸಿ ಸುಳ್ಳನ್ನು ಸಂಸತ್ತಿನಲ್ಲಿ ಹೇಳಿದ್ದಾರೆ. ಅಧಿವೇಶನದಲ್ಲಿ ಭಾಷಣ ಮಾಡುವ ಮೊದಲು ಪ್ರತಿಭಟನಾ ನಿರತ ರೈತರನ್ನು ಕಚೇರಿಗೆ ಕರೆಸಿಕೊಂಡು ಅಹವಾಲು ಕೇಳಿದ್ದರೆ, ರೈತರ ಬಗ್ಗೆ ಬರೆದುಕೊಟ್ಟ ಸುಳ್ಳು ಭಾಷಣ ಓದಲು ಅವರ ಆತ್ಮಸಾಕ್ಷಿ ಖಂಡಿತವಾಗಿಯೂ ಒಪ್ಪುತ್ತಿರಲಿಲ್ಲ" ಎಂದು ಕಿಡಿಕಾರಿದ್ದಾರೆ.
ಶುಕ್ರವಾರ ಸಂಸತ್ತಿನ ಜಂಟಿ ಅಧಿವೇಶವನ್ನುದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿಯವರು, "ನೂತನ ಕೃಷಿ ಕಾಯ್ದೆಗಳು ರೈತರಿಗೆ ಅಧಿಕ ಸೌಲಭ್ಯಗಳನ್ನು ಹಾಗೂ ಅಧಿಕಾರವನ್ನು ನೀಡಿವೆ. ಬದಲಾಗಿ, ಹಿಂದೆ ಇದ್ದ ಯಾವುದೇ ಅಧಿಕಾರ ಹಾಗೂ ಸೌಲಭ್ಯವನ್ನು ಕಸಿದುಕೊಂಡಿಲ್ಲ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್ನ ಸೂಚನೆಯನ್ನು ಪಾಲಿಸಲಿದೆ" ಎಂದಿದ್ದರು.
ಕೆಂಪುಕೋಟೆಯಲ್ಲು ಧಾರ್ಮಿಕ ಧ್ವಜಾರೋಹಣ ಮಾಡಿರುವ ಕಾರಣಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, "ಈ ಘಟನೆ ಅತ್ಯಂತ ದುರದೃಷ್ಟಕರ" ಎಂದು ಹೇಳಿದ್ದರು.