ನವದೆಹಲಿ,ಜ.30 (DaijiworldNews/HR): ಅಮೆಜಾನ್ ಕಂಪೆನಿಯೊಂದಿಗೆ ಕರ್ನಾಟಕ ಸರ್ಕಾರವು ಒಪ್ಪಂದ ಮಾಡಿಕೊಳ್ಳುತ್ತಿರುವುದಕ್ಕೆ ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಐಎಟಿ) ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ.
"ಕರ್ನಾಟಕ ಸರ್ಕಾರವು ಅಮೆಜಾನ್ ಜತೆಗೆ ಒಪ್ಪಂದ ಮಾಡಿಕೊಳ್ಳುತ್ತಿರುವುದನ್ನು ನಾವು ಪ್ರಬಲವಾಗಿ ಆಕ್ಷೇಪಿಸುತ್ತೇವೆ. ಆ ಕಂಪೆನಿಯು ಬಗ್ಗೆ ತನಿಖಾ ಸಂಸ್ಥೆಗಳ ವಿಚಾರಣೆ ಎದುರಿಸುತ್ತಿದ್ದು, ಜತೆಗೆ ಕರ್ನಾಟಕ ಹೈಕೋರ್ಟ್ ನಲ್ಲಿ ಪ್ರಕರಣ ಕೂಡ ಇದೆ. ದುಷ್ಕೃತ್ಯಗಳಲ್ಲಿ ತೊಡಗಿರುವ ಸ್ಪರ್ಧೆ ಇಲ್ಲದಂತೆ ಮಾಡುವ ಹಾಗೂ ದೇಶದ ಸಣ್ಣ ವರ್ತಕರನ್ನು ನಾಶಪಡಿಸುವ ಆರೋಪಗಳು ಅದರ ಮೇಲಿದೆ. ಇ ಕಾಮರ್ಸ್ ಮಾತ್ರವಲ್ಲದೆ ದೇಶದ ರೀಟೇಲ್ ವ್ಯವಹಾರವನ್ನು ಸಹ ಹತೋಟಿಯಲ್ಲಿ ಇರಿಸಿಕೊಳ್ಳುವ ನೀತಿ ರೂಪಿಸಿಕೊಳ್ಳುತ್ತಿದೆ" ಎಂದು ಕಾನ್ಫಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಹೇಳಿದೆ.
ಇನ್ನು "ಕರ್ನಾಟಕ ಸರ್ಕಾರಕ್ಕೆ ಈ ಕುರಿತು ಗೊತ್ತಿಲ್ಲ ಎಂಬುದನ್ನು ನಂಬುವುದಕ್ಕೆ ಅಸಾಧ್ಯವಾಗಿದೆ. ಇದರ ಹೊರತಾಗಿ ಅಮೆಜಾನ್ ಜತೆ ಒಪ್ಪಂದ ಮಾಡಿಕೊಂಡಿದೆ. ಇದು ಕರ್ನಾಟಕದ ವರ್ತಕರ ಪಾಲಿಗೆ ಮಾತ್ರ ಅಲ್ಲ, ಇಡೀ ದೇಶದ ಪಾಲಿಗೆ ಗಂಭೀರ ಸಮಸ್ಯೆ" ಎಂದು ಹೇಳಿದೆ.