ನವದೆಹಲಿ, ಜ.30 (DaijiworldNews/PY): "ಆರ್ಥಿಕ ಸಮೀಕ್ಷೆಯನ್ನು ಮುದ್ರಿಸದಿರಲು ಸರ್ಕಾರ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ" ಎಂದು ಕಾಂಗ್ರೆಸ್ನ ಹಿರಿಯ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಶುಕ್ರವಾರ ಕೇಂದ್ರ ಸರ್ಕಾರ ಸಂಸತ್ನಲ್ಲಿ ಮಂಡಿಸಿದ್ದ ಆರ್ಥಿಕ ಸಮೀಕ್ಷೆಯು ವಿಭಿನ್ನವಾದ ಉದ್ದೇಶವನ್ನು ಹೊಂದಿದ್ದು, ಉದ್ದೇಶ ಸ್ಪಷ್ಟವಾಗಿರಲಿಲ್ಲ" ಎಂದಿದ್ದಾರೆ.
"ಸರ್ಕಾರವು ಆರ್ಥಿಕ ಚೇತರಿಕೆಗಾಗಿ ದೂರದೃಷ್ಟಿಯ ನೀತಿ ಪ್ರತಿಕ್ರಿಯೆಯನ್ನು ಜಾರಿಗೆ ತಂದಿದೆ ಎನ್ನುವ ಸ್ವಯಂ-ಅಭಿನಂದನಾ ತೀರ್ಮಾನಕ್ಕೆ ಮಾತ್ರ ನೆರವಾಗುತ್ತದೆ" ಎಂದು ಟೀಕಿಸಿದ್ದಾರೆ.
"ಆರ್ಥಿಕ ಸಮೀಕ್ಷೆಯನ್ನು ಮುದ್ರಿಸದಿರಲು ಸರ್ಕಾರ ತೆಗೆದುಕೊಂಡ ಅತ್ಯುತ್ತಮ ನಿರ್ಧಾರ. ಒಂದು ಕಾಲದಲ್ಲಿ, ಸಮೀಕ್ಷೆಯು ಮುಂಬರುವ ವರ್ಷದ ಆರ್ಥಿಕ ಮುನ್ಸೂಚನೆಯನ್ನು ಹಾಗೂ ಜನರಿಗೆ ಸರಳ ಭಾಷೆಯಲ್ಲಿ ಆರ್ಥಿಕತೆಯ ಸ್ಥಿತಿಯನ್ನು ತಿಳಿಸುವ ಮಾಧ್ಯಮವಾಗಿತ್ತು" ಎಂದಿದ್ದಾರೆ.