ಶ್ರೀನಗರ, ಜ.30 (DaijiworldNews/HR): ಉಗ್ರಗಾಮಿ ವಿರೋಧಿ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹಿಝ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಹತ್ಯೆ ಮಾಡಿದ ಘಟನೆ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಥ್ರಾಲ್ ಪ್ರದೇಶದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಪುಲ್ವಾಮಾ ಜಿಲ್ಲೆಯ ಕಾಕಾಪುರ ಪ್ರದೇಶದಲ್ಲಿ ಮತ್ತೊಂದು ಕಾರ್ಯಾಚರಣೆ ಕೂಡ ಪ್ರಗತಿಯಲ್ಲಿದ್ದು, ಅಲ್ಲಿ 3 ಉಗ್ರರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಮೊದಲ ಕಾರ್ಯಾಚರಣೆಯಲ್ಲಿ ಹತರಾದ ಉಗ್ರರನ್ನು ನಯೀಬಾಗ್ನ ವಾರಿಸ್ ಹಸನ್, ಮೊಂಗ್ಹಾಮಾದ ಆರಿಫ್ ಬಶೀರ್ ಮತ್ತು ಅವಂತಿಪುರದ ಅತ್ಹೀಶಮುಲ್ ಹಖ್ ಎಂದು ಗುರುತಿಸಲಾಗಿದೆ.
ಮೃತ ಉಗ್ರರು ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿದ್ದರು ಎಂದು ತಿಳಿದು ಬಂದಿದೆ.