ನವದೆಹಲಿ, ಜ.30 (DaijiworldNews/HR): ಸಿಂಘು ಗಡಿಯಲ್ಲಿ ರೈತರು ಮತ್ತು ಸ್ಥಳಿಯರೊಂದಿಗೆ ಘರ್ಷಣೆ ನಡೆದಾಗ ಅಲಿಪುರ್ ಠಾಣಾಧಿಕಾರಿ ಪ್ರದೀಪ್ ಪಲಿವಾಲ್ ಮೇಲೆ ತಲ್ವಾರ್ ನಿಂದ ದಾಳಿ ನಡೆಸಿದ್ದ ವ್ಯಕ್ತಿ ಸೇರಿ 44 ಜನರನ್ನು ಕೊಲೆ ಯತ್ನ ಮತ್ತು ಸಾರ್ವಜನಿಕ ಸೇವೆಗೆ ಅಡ್ಡಿ ಆರೋಪದಡಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬಂಧಿತನನ್ನು ಪಂಜಾಬ್ ಮೂಲದ ರಂಜೀತ್ ಸಿಂಗ್(22 ) ಎಂದು ಗುರುತಿಸಲಾಗಿದೆ.
ಪ್ರತಿಭಟನಾ ಸ್ಥಳ ಖಾಲಿ ಮಾಡಿ, ಗಡಿ ತೆರೆಯುವಂತೆ ಮನವಿ ಮಾಡಲು 200ಕ್ಕೂ ಅಧಿಕ ಹಳ್ಳಿಗರು ಕಿಸಾನ್ ಮಜದೂರ್ ಸಂಘರ್ಷ ಸಮಿತಿ ಮುಖಂಡರ ಭೇಟಿಗೆ ಅಲಿಪುರ್ ಪ್ರದೇಶಕ್ಕೆ ಬಂದಿದ್ದರು.
ಇನ್ನು ಈ ಘಟನೆ ಕುರಿತಂತೆ ಅಲಿಪುರ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಈ ಮಧ್ಯೆ, ಪ್ರತಿಭಟನಾ ಸ್ಥಳಕ್ಕೆ ಬಂದಿದ್ದವರು ಸ್ಥಳಿಯ ಹಳ್ಳಿಗಳ ಜನರಲ್ಲ, ಮಾರಕಾಸ್ತ್ರ ಹಿಡಿದು ಬಂದಿದ್ದ ಗೂಂಡಾಗಳು ಎಂದು ರೈತರು ಆರೋಪಿಸಿದ್ದಾರೆ.