ಬೆಂಗಳೂರು, ಜ. 29 (DaijiworldNews/SM): ಏಳು ದಿನಗಳ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು ಈ ವೇಳೆ ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಸದಸ್ಯ ಮತ್ತು ಪಕ್ಷದ ವಕ್ತಾರ ಪ್ರಕಾಶ್ ರಾಥೋಡ್ ಅಶ್ಲೀಲ ಸಂದೇಶಗಳನ್ನು ವೀಕ್ಷಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಾದೇಶಿಕ ಟಿವಿ ನ್ಯೂಸ್ ಚಾನೆಲ್ ಒಂದು ಈ ಬಗ್ಗೆ "ಎಕ್ಸ್ಕ್ಲೂಸಿವ್" ವರದಿ ಮಾಡಿದೆ. 15 ಸೆಕೆಂಡುಗಳ ಕ್ಲಿಪ್ ವೈರಲ್ ಆಗಿದೆ. ಸದನದಲ್ಲಿ ಅಶ್ಲೀಲ ಸಂದೇಶ ವೀಕ್ಷಿಸಿದ ಶಾಸಕರ ನಡೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಮತ್ತೊಂದೆಡೆ ರಾಥೋಡ್ ಅವರು ಪ್ರತಿಕ್ರಿಯೆ ನೀಡಿದ್ದು, ಸದನದಲ್ಲಿ ನಾನು ಯಾವುದೇ ಅಶ್ಲೀಲ ವೀಡಿಯೋ ನೋಡಿಲ್ಲ ಎಂದಿದ್ದಾರೆ. ಪ್ರಶ್ನೋತ್ತರ ಸಮಯದಲ್ಲಿ, ನಾನು ಪ್ರಶ್ನೆ ಸಂಖ್ಯೆ 7 ಅನ್ನು ಕೇಳಬೇಕಾಗಿತ್ತು. ನನ್ನ ಪ್ರಶ್ನೆಗೆ ನಾನು ಉತ್ತರವನ್ನು ಸ್ವೀಕರಿಸಿದ್ದೇನೆ ಅಥವಾ ಇಲ್ಲವೇ ಎಂದು ನಾನು ಸಂದೇಶವನ್ನು ನೋಡಲು ಪ್ರಯತ್ನಿಸುತ್ತಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.