ಉಳ್ಳಾಲ, ಜ 29 (DaijiworldNews/SM): ರಸ್ತೆ ಅಗಲೀಕರಣ ಕಾಮಗಾರಿ ವೇಳೆ ವಿದ್ಯುತ್ ವಯರಿಗೆ ಕ್ರೇನ್ ತಾಗಿದ್ದು, ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ತೊಕ್ಕೊಟ್ಟು-ಮೆಲ್ಕಾರ್ ರಸ್ತೆಯ ರಸ್ತೆ ಕಾಮಗಾರಿ ವೇಳೆ ಈ ಘಟನೆ ನಡೆದಿದೆ.
ಅವಘಡ ಸಂದರ್ಭ ಕ್ರೇನ್ ನಿಂದ ಹಾರಿ ಚಾಲಕ ಪವಾಡ ಸದೃಶ ಪಾರಾಗಿದ್ದಾನೆ. ಈ ವೇಳೆ ವಿದ್ಯುತ್ ವಯರ್ ರಸ್ತೆಗೆ ಬಿದ್ದಿದೆ. ವಯರ್ ರಸ್ತೆಗೆ ಬಿದ್ದ ಸಂದರ್ಭದಲ್ಲಿ ಆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿ ಪವಾಡ ಸದೃಶ್ಯ ಪಾರಾಗಿದ್ದಾಳೆ. ರಸ್ತೆಗೆ ಬಿದ್ದ ವಯರ್ ನಿಂದ ಕೆಲವೇ ಕೆಲವು ಸೆಕೆಂಡುಗಳ ಅಂತರದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಪಾರಾಗಿದ್ದಾಳೆ.
ಇನ್ನು ವಿದ್ಯುತ್ ತಂತಿ ಬಸ್, ವಾಹನಗಳ ಮೇಲೆ ವಿದ್ಯುತ್ ತಂತಿಗಳು ಬೀಳುವ ಸಾಧ್ಯತೆ ಇತ್ತು. ಪವಾಡ ಸದೃಶವಾಗಿ ಮಹಾ ದುರಂತ ತಪ್ಪಿದಂತಾಗಿದೆ. ಇನ್ನು ತಕ್ಷಣಕ್ಕೆ ಸ್ಪಂದಿಸಿರುವ ಲೈನ್ ಮೆನ್ ಗಳು ಜೀವದ ಹಂಗು ತೊರೆದು ತುರ್ತು ಕಾರ್ಯಾಚರಣೆ ನಡೆಸಿದ್ದಾರೆ. ಲೈನ್ ಮೆನ್ ಗಳ ತುರ್ತು ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ಕೆಲ ನಿಮಿಷಗಳ ಕಾಲ ರಸ್ತೆ ಸಂಚಾರದಲ್ಲಿ ಅಡ್ಡಿಯುಂಟಾಗಿದೆ. ಮೆಸ್ಕಾಂ ಎಇಇ ದಯಾನಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.