ನವದೆಹಲಿ, ಜ.29 (DaijiworldNews/PY): "ಶುಕ್ರವಾರ ಈ ದಶಕದ ಪ್ರಥಮ ಬಜೆಟ್ ಅಧೀವೇಶನವು ಪ್ರಾರಂಭವಾಗಲಿದೆ. ಈ ಬಜೆಟ್ ಅಧಿವೇಶನವು ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ಬಹಳ ಮಹತ್ವದ್ದಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಸತ್ತಿನ ಬಟೆಜ್ ಅಧಿವೇಶನದ ಪ್ರಾರಂಭಕ್ಕೂ ಮೊದಲು ಪ್ರಧಾನಿ ಮೋದಿ ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, "2020ನೇ ವರ್ಷದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ಯಾಕೆಜ್ ಸ್ವರೂಪದಲ್ಲಿ ಮೂರರಿಂದ ನಾಲ್ಕು ನಿಮಿಷ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಾರಿ ಮಂಡಿಸಲಿರುವ ಬಜೆಟ್ ಸಹ ಈ ಸರಣಿಯ ಭಾಗವಾಗಿದೆ" ಎಂದಿದ್ದಾರೆ.
"ಈ ದಶಕದತ್ತ ಗಮನಹರಿಸಿ ಭಿನ್ನ ಕಲಾಪಗಳಲ್ಲಿ ಚರ್ಚೆ ಹಾಗೂ ಪ್ರಸ್ತಾವಗಳಿರಲಿವೆ. ಈ ಅಧಿವೇಶನವನ್ನು ಜನರ ಆಶೋತ್ತರಗಳ ಈಡೇರಿಕೆಗೆ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.
"ಪ್ರಥಮ ಬಾರಿಗೆ ಭಾರತದ ಇತಿಹಾಸದಲ್ಲೇ ಹಣಕಾಸು ಸಚಿವರು 2020ರ ಸಾಲಿನಲ್ಲಿ 4–5 ನಿಮಿಷ ಬಜೆಟ್ ಮಂಡಿಸಿದ್ದಾರೆ" ಎಂದು ಹೇಳಿದ್ದಾರೆ.