ನವದೆಹಲಿ, ಜ.29 (DaijiworldNews/HR): ಹೈದರಾಬಾದ್ನ ರಾಷ್ಟ್ರೀಯ ತನಿಖಾ ದಳದ ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್ಪಿ) ಟಿ.ವಿ ರಾಜೇಶ್ ಅವರು 2021ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಂಸನೀಯ ಸೇವೆಗಾಗಿ ರಾಷ್ಟ್ರಪತಿಗಳ ಪೋಲೀಸ್ ಪದಕವನ್ನು ಪಡೆದುಕೊಂಡಿದ್ದಾರೆ.
ಅವರಿಗೆ ಈ ಗೌರವವನ್ನು ಮಾವೋವಾದಿಗಳಿಂದ ಹತರಾದ ಆಂಧ್ರಪ್ರದೇಶದ ಅರಕು ಕ್ಷೇತ್ರದ ಶಾಸಕರ ಹತ್ಯೆಯ ಪ್ರಕರಣವನ್ನು ಭೇದಿಸಿರುವುದಕ್ಕಾಗಿ ನೀಡಲಾಗಿದೆ.
ರಾಜೇಶ್ ಟಿ.ವಿ. ಅವರು ಮಂಗಳೂರಿನ ಕೇಂದ್ರೀಯ ಅಬಕಾರಿ, ಸರಕು ಮತ್ತು ಸೇವಾ ತೆರಿಗೆಯ ಆಯುಕ್ತಾಲಯದಲ್ಲಿ ಅಧೀಕ್ಷಕರಾಗಿದ್ದು, ಪ್ರಸ್ತುತ ರಾಷ್ಟ್ರೀಯ ತನಿಖಾ ದಳದಲ್ಲಿ ಕರ್ತವ್ಯಕ್ಕೆ ನಿಯೋಜನೆ ಹೊಂದಿರುತ್ತಾರೆ.
ಇನ್ನು ಈ ಹಿಂದೆ ರಾಜೇಶ್ ಅವರು ಕಂದಾಯ ಗುಪ್ತಚರ ನಿರ್ದೇಶನಾಲಯ, ಮಂಗಳೂರು ಮತ್ತು ಕೇಂದ್ರೀಯ ತನಿಖಾ ದಳ ( ಸಿಬಿಐ) ಗೋವಾದಲ್ಲೂ ಸೇವೆ ಸಲ್ಲಿಸಿರುತ್ತಾರೆ.