ಮೈಸೂರು, ಜ.29 (DaijiworldNews/PY): "ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕು" ಎಂದು ಎಸ್.ಟಿ ಸಮುದಾಯ ಒತ್ತಾಯಿಸಿದೆ.
ಮೈಸೂರಿನಲ್ಲಿ ಪಕ್ಷದ ಕಾರ್ಯಕಾರಿ ಸಮಿತಿಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿತ್ತಿದ್ದ ಸಂದರ್ಭ, "ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕು" ಎಂದು ಎಸ್.ಟಿ.ಮೋರ್ಚಾದ ಸದಸ್ಯರು ಘೋಷಣೆ ಕೂಗಲಾರಂಭಿಸಿದರು.
ಎಸ್.ಟಿ.ಮೋರ್ಚಾದ ಸದಸ್ಯರು ಘೋಷಣೆಯಿಂದ ಬೇಸರ ವ್ಯಕ್ತಪಡಿಸಿದ ನಳಿನ್, ಪಕ್ಷದ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದು, "ಇದು ರಾಜ್ಯ ಎಸ್.ಟಿ ಕಾರ್ಯಕಾರಿ ಸಭೆಯಾಗಿದ್ದು, ಇದು ಬಿಜೆಪಿಯ ಭಾಗ. ನಮ್ಮದು ಶಿಸ್ತುಬದ್ದವಾದ ಪಕ್ಷವಾಗಿದ್ದು, ಇದಕ್ಕೆಲ್ಲಾ ಅವಕಾಶ ಕಲ್ಪಿಸುವುದಿಲ್ಲ" ಎಂದಿದ್ದಾರೆ.
"ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯಿಂದ ಸಂತಸವಾಗಿದ್ದಾರೆ. ಕೃಷಿ ಕಾಯ್ದೆ ವಿರುದ್ದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದವರು ರೈತರಲ್ಲ" ಎಂದು ಹೇಳಿದ್ದಾರೆ.