ನವದೆಹಲಿ, ಜ. 28 (DaijiworldNews/HR): ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗುವ ಪ್ರಚೋದನಾಕಾರಿ ಕಾರ್ಯಕ್ರಮಗಳ ತಡೆಗೆ ಕ್ರಮ ಜರುಗಿಸಬೇಕೆಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಜನವರಿ 26ರಂದು ದೆಹಲಿಯಲ್ಲಿ ಕೆಲವೆಡೆ ಇಂಟರ್ನೆಟ್ ಸಂಪರ್ಕಕ್ಕೆ ನಿರ್ಬಂಧ ಹೇರಿದ್ದೂ ರ್ಯಾಲಿ ಹಿಂಸೆಗೆ ತಿರುಗಲು ಕಾರಣವಾಯಿತು ಎಂಬ ಅಂಶವನ್ನು ಉಲ್ಲೇಖಿಸಿದ ಕೋರ್ಟ್, "ನ್ಯಾಯಯುತ ಸುದ್ದಿ ಪ್ರಸಾರ ಈ ಹೊತ್ತಿನ ಅಗತ್ಯವಾಗಿದ್ದು, ಪ್ರಚೋದನೆಯ ಉದ್ದೇಶವನ್ನು ಹೊಂದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ" ಎಂದು ತಿಳಿಸಿದೆ.
ಇನ್ನು ವಾಸ್ತವವಾದ ಪರಿಸ್ಥಿತಿಯು ಏನೆಂದರೆ ಕೆಲವೊಂದು ಕಾರ್ಯಕ್ರಮಗಳು ಪ್ರಚೋದನಾಕಾರಿ ಆಗಿರುತ್ತದೆ, ಸರ್ಕಾರ ಈ ಕುರಿತು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ.ಬೊಬಡೆ ನೇತೃತ್ವದ ಪೀಠವು ಕೇಂದ್ರ ಸರ್ಕಾರಕ್ಕೆ ಹೇಳಿದೆ.
ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಹ್ಮಣಿಯನ್ ಅವರು ಇದ್ದರು.