ನವದೆಹಲಿ,ಜ. 28 (DaijiworldNews/HR): ಚೀನಾ ಮತ್ತು ಭಾರತದ ನಡುವಿನ ಬಾಂಧವ್ಯವನ್ನುಸುಧಾರಣೆಗೆ ತರುವ ಉದ್ದೇಶದಿಂದಾಗಿ ಎಂಟು ಅಂಶಗಳಿರುವ ಸಲಹೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮುಂದಿಟ್ಟಿದ್ದಾರೆ.
ಈ ಕುರಿತು ಆನ್ಲೈನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, "2020ರಲ್ಲಿ ಪೂರ್ವ ಲಡಾಖ್ನಲ್ಲಿ ನಡೆದ ಘಟನೆ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡಿದೆ. ಗಡಿರೇಖೆಯಲ್ಲಿ ಬದಲಾವಣೆ ತರುವ ಯಾವುದೇ ಪ್ರಯತ್ನವೂ ಒಪ್ಪಿತವಲ್ಲ" ಎಂದರು.
ಗಡಿ ನಿಯಂತ್ರಣ ರೇಖೆಯುದ್ಧಕ್ಕೂ ನಿರ್ವಹಣೆ ಕುರಿತಂತೆ ಎಲ್ಲ ಒಪ್ಪಂದಗಳಿಗೆ ಬದ್ಧರಾಗಿರುವುದು, ಪರಸ್ಪರ ಗೌರವ, ಸೂಕ್ಷ್ಮತೆ ಹಾಗೂ ಏಷ್ಯಾ ಖಂಡದಲ್ಲಿ ಅಭಿವೃದ್ಧಿ ಕುರಿತಂತೆ ಪರಸ್ಪರರ ಆಕಾಂಕ್ಷೆಗಳನ್ನು ಗೌರವಿಸಬೇಕು ಎಂಬುದು ಎಂಟು ಅಂಶಗಳಲ್ಲಿ ಒಳಗೊಂಡಿದೆ.
ಇನ್ನು "ಗಡಿಯಲ್ಲಿ ಈಗಿರುವ ಸ್ಥಿತಿ ಕಡೆಗಣಿಸಬಹುದು ಹಾಗೂ ಜನರ ಬದುಕಿಗೂ ಧಕ್ಕೆಯಾಗದು ಎಂಬ ನಿಲುವು ವಾಸ್ತವವಾಗಿ ಅಷ್ಟು ಸುಲಭವಾದುದಲ್ಲ. ಪ್ರಸ್ತುತ ಎರಡು ದೇಶಗಳ ನಡುವಿನ ಬಾಂಧವ್ಯ ಕವಲುದಾರಿಯಲ್ಲಿದೆ" ಎಂದು ಹೇಳಿದ್ದಾರೆ.