ನವದೆಹಲಿ, ಜ. 28 (DaijiworldNews/HR): "ಭಾರತಕ್ಕೆ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದರು.
ಈ ಕುರಿತು ದೆಹಲಿಯಲ್ಲಿ ಎನ್ಸಿಸಿ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, "ಭಾರತವು ಕೊರೊನಾ ವಿರುದ್ಧ ಹೋರಾಡಿದೆ, ಅಲ್ಲದೆ ಭಾರತಕ್ಕೆ ಸವಾಲೆಸೆದವರ ಆಧುನಿಕ ಕ್ಷಿಪಣಿಗಳನ್ನು ನಾಶಪಡಿಸುವ ಮೂಲಕ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಭಾರತಕ್ಕೆ ಪ್ರತಿಯೊಂದು ಕ್ಷೇತ್ರದಲ್ಲೂ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಿದೆ" ಎಂದರು.
ಇನ್ನು "ಭಾರತ ಲಸಿಕೆಯಲ್ಲಿ ಆತ್ಮ ನಿರ್ಭರ್ ಆಗಿದ್ದು, ಅದೇ ರೀತಿ ಆಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಹುರುಪು ನಮಗಿದೆ. ನಮ್ಮ ದೇಶದ ಶಸ್ತ್ರಾಸ್ತ್ರ ಪಡೆಯ ಪ್ರತಿಯೊಂದು ವಿಭಾಗವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ" ಎಂದು ಹೇಳಿದ್ದಾರೆ.