ಮುಂಬೈ,ಜ. 28 (DaijiworldNews/HR): ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಹೇಳಿಕೆ ನೀಡಿದ್ದು, ಇದನ್ನು ಶಿವಸೇನಾ ಮುಖಂಡ ಸಂಜಯ್ ರಾವತ್ ಖಂಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕನ್ನಡ ಭಾಷಿಕರು ಕರ್ನಾಟಕದಲ್ಲಿನ ಮರಾಠಿ ಪ್ರಾಬಲ್ಯದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಬಯಸಿದ್ದು, ಲಕ್ಷಣ್ ಸವದಿ ಅವರು ಹೇಳಿಕೆ ನೀಡುವ ಮುನ್ನ ಚರಿತ್ರೆಯನ್ನು ಅರ್ಥಮಾಡಿಕೊಳ್ಳಬೇಕು. ಮರಾಠಿ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಣೆ ಕರ್ನಾಟಕದ ಜೊತೆಗಿನ ಗಡಿವಿವಾದದಲ್ಲಿದೆ" ಎಂದರು.
"ಕರ್ನಾಟಕಕ್ಕೆ ಮುಂಬೈಯನ್ನು ಸೇರ್ಪಡೆ ಮಾಡಬೇಕು, ಅಲ್ಲಿಯವರಗೆ ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರವನ್ಮು ಒತ್ತಾಯಿಸುತ್ತೇನೆ. ನಮ್ಮ ಕ್ಷೇತ್ರ ಇರುವುದು ಮುಂಬೈ ಕರ್ನಾಟಕದಲ್ಲಿ ಹಾಗಾಗಿ ನನ್ನ ಕ್ಷೇತ್ರದ ಮೊದಲ ಶಾಸಕ ಮುಂಬೈ ವಿಧಾನಸಭೆಗೆ ಹೋಗಿದ್ದರು. ಮುಂಬೈನಲ್ಲಿ ನಮ್ಮ ಆಸ್ತಿ ಇದೆ. ಮುಂಬೈ ಕರ್ನಾಟಕದ ಭಾಗ ಎಂದು ತೀರ್ಮಾನವಾಗಿದೆ ಹಾಗಾಗಿ ಕರ್ನಾಟಕಕ್ಕೆ ಸೇರಿಸಬೇಕು" ಎಂದು ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದರು.