ನವದೆಹಲಿ,ಜ. 28 (DaijiworldNews/HR): "ಆಮ್ ಆದ್ಮಿ ಪಕ್ಷವು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ, ಗುಜರಾತ್ ಸೇರಿದಂತೆ ಒಟ್ಟು ಆರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದೆ" ಎಂದು ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಉಳಿದ ಬೇರೆ ಪಕ್ಷಗಳಿಗೆ ಸರಿಯಾದ ದೃಷ್ಟಿಕೋನವಿಲ್ಲ, ಹಾಗಾಗಿ ಅವುಗಳು ನಡೆದ ವಿಷಯಗಳ ಬಗ್ಗೆ ಹೇಳುತ್ತಾ ಇರುತ್ತವೆ. ಆದರೆ ಆಮ್ ಆದ್ಮಿ ಪಕ್ಷವು ಭವಿಷ್ಯದ ಬಗ್ಗೆ ಮಾತನಾಡುತ್ತದೆ. ಅಲ್ಲದೆ ನಮ್ಮ ಪಕ್ಷವು 21 ಮತ್ತು 22ನೇ ಶತಮಾನದ ದೃಷ್ಟಿಕೋನವನ್ನು ಹೊಂದಿದೆ" ಎಂದರು.
ಇನ್ನು "ಆಮ್ ಆದ್ಮಿ ಪಕ್ಷ ಮುಂದಿನ ಎರಡು ವರ್ಷಗಳಲ್ಲಿ ಆರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಪಕ್ಷವನ್ನು ತಳ್ಳಮಟ್ಟದಿಂದ ಬಲಿಷ್ಠಗೊಳಿಸಬೇಕು" ಎಂದು ಪಕ್ಷದ ಸದಸ್ಯರಿಗೆ ಸೂಚಿಸಿದ್ದಾರೆ.