ದಿಫು, ಜ.28 (DaijiworldNews/PY): ಅಸ್ಸಾಂನ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಧಾನ್ಸಿರಿ ಸಮೀಪದ ಹಳ್ಳಿಯಲ್ಲಿ ಅಪರಿಚಿತ ಬಂದೂಕುಧಾರಿಯೋರ್ವ ಮನಸೋ ಇಚ್ಚೇ ಗುಂಡು ಹಾರಿಸಿದ ಪರಿಣಾಮ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತರನ್ನು ಅಮಿತ್ ಸುನಿಸಾ (42) ಮತ್ತು ಅಲೊಟಾ ಮೈಬೊಗ್ಸಾ (60), ತೀವ್ರ ಗಾಯಗೊಂಡವರನ್ನು ಅಶಿತಾ ಫೊಂಗ್ಲೊಸಾ (25) ಎಂದು ಗುರುತಿಸಲಾಗಿದೆ. ಅಶಿತಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ದೇಬಜಿತ್ ದಿಯೋರಿ ಅವರು, "ಜ.27ರ ಬುಧವಾರದಂದು ಧಾನ್ಸಿರಿ ಸಮೀಪದ ಖಾರ್ನೈದಿಸಾ ಹಳ್ಳಿಯಲ್ಲಿ ಬುಷು ದಿಮಾ ಹಬ್ಬವನ್ನು ಆಚರಿಸುತ್ತಿದ್ದರು. ಈ ಸಂದರ್ಭ ಘಟನೆ ಸಂಭವಿಸಿದೆ" ಎಂದು ತಿಳಿಸಿದ್ದಾರೆ.
"ಈ ಘಟನೆಯ ಹಿಂದ ದಿಮಸಾ ನ್ಯಾಷನಲ್ ಲಿಬರೇಷನ್ ಆರ್ಮಿ ಸಂಘಟನೆಯ ಉಗ್ರರ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ತನಿಖೆ ಮುಂದುವರೆದಿದೆ" ಎಂದು ಎಸ್ಪಿ ಹೇಳಿದ್ದಾರೆ.