ಬೆಂಗಳೂರು, ಜ. 28 (DaijiworldNews/HR): "ಕರ್ನಾಟಕಕ್ಕೆ ಮುಂಬೈಯನ್ನು ಸೇರ್ಪಡೆ ಮಾಡಬೇಕು, ಅಲ್ಲಿಯವರಗೆ ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸುವಂತೆ ಕೇಂದ್ರ ಸರ್ಕಾರವನ್ಮು ಒತ್ತಾಯಿಸುತ್ತೇನೆ" ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಕ್ಷೇತ್ರ ಇರುವುದು ಮುಂಬೈ ಕರ್ನಾಟಕದಲ್ಲಿ ಹಾಗಾಗಿ ನನ್ನಕ್ಷೇತ್ರದ ಮೊದಲ ಶಾಸಕ ಮುಂಬೈ ವಿಧಾನಸಭೆಗೆ ಹೋಗಿದ್ದರು. ಮುಂಬೈನಲ್ಲಿ ನಮ್ಮ ಆಸ್ತಿ ಇದೆ. ಮುಂಬೈ ಕರ್ನಾಟಕದ ಭಾಗ ಎಂದು ತೀರ್ಮಾನವಾಗಿದೆ ಹಾಗಾಗಿ ಕರ್ನಾಟಕಕ್ಕೆ ಸೇರಿಸಿ" ಎಂದರು.
ಇನ್ನು "ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿಗಳ ಜತೆಯೂ ಚರ್ಚಿಸಿದ್ದು, ಮುಂದಿನ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ಅವರು ತೆಗೆದುಕೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.