ಹುಣಸೂರು,ಜ. 28 (DaijiworldNews/HR): "ಸಚಿವರುಗಳ ಬಾಯಿಮಾತಿನ ಸಹಾನುಭೂತಿ ಬೇಕಿಲ್ಲ, ಬದಲಾಗಿ ನಮ್ಮ 17 ಮಂದಿಯ ಗುಂಪು ನನ್ನ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡಬೇಕಿತ್ತು" ಎಂದು ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ಈ ಕುರಿತು ಎಸ್.ಟಿ.ಸೋಮಶೇಖರ್, ಬಿ.ಸಿ. ಪಾಟೀಲ್ ಮತ್ತಿತರರು ವಿಶ್ವನಾಥರೊಂದಿಗಿದ್ದೇವೆ ಎಂದು ಹೇಳಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಮಾಧ್ಯಮಗಳಲ್ಲಿ ನನ್ನ ಬಗ್ಗೆ ಬಾಯಿ ಮಾತಿನ ಸಹಾನುಭೂತಿ ಬೇಕಿಲ್ಲ, ಆದರೂ ಒಬ್ಬಂಟಿಯಲ್ಲವೆಂದು ಹೇಳಿದ್ದಕ್ಕೆ ಅಭಿನಂದಿಸುತ್ತೇನೆ" ಎಂದರು.
ಇನ್ನು ವಿಧಾನ ಪರಿಷತ್ ಉಪಸಭಾಪತಿ ಹುದ್ದೆ ಕೊಟ್ಟರೆ ಒಪ್ಪುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ನಾನು ಕ್ಯಾಬಿನೆಟ್ ದರ್ಜೆ ಸಚಿವನಾಗಿದ್ದವನು, ಉಪ ಸಭಾಪತಿ ಹುದ್ದೆಗೆ ಒಪ್ಪುವುದಿಲ್ಲ. ಆದರೆ ಪಕ್ಷ, ಮುಖ್ಯಮಂತ್ರಿ ವಿಶ್ವಾಸವಿಟ್ಟು ಸಭಾಪತಿ ಹುದ್ದೆ ನೀಡಿದರೆ ನೋಡೋಣ" ಎಂದು ಹೇಳಿದ್ದಾರೆ.