ನವದೆಹಲಿ, ಜ. 28 (DaijiworldNews/HR): ಯೆಸ್ ಬ್ಯಾಂಕ್ನ ಸಹ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ಪಿಎಂಸಿ ಬ್ಯಾಂಕ್ ಸಾಲ ಹಗರಣ ಮತ್ತು ಅಕ್ರಮ ಹಣ ವರ್ಗಾವಣೆ (ಪಿಎಂಎಲ್ಎ) ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ(ಇ.ಡಿ) ಬಂಧಿಸಿದೆ.
ಯೆಸ್ ಬ್ಯಾಂಕ್ನಲ್ಲಿ ಅವ್ಯವಹಾರ, ಲಂಚ ಪಡೆದ ಆರೋಪದಡಿ ರಾಣಾ ಕಪೂರ್ ಅವರನ್ನು ಈ ಹಿಂದೆಯೇ ಬಂಧಿಸಿದ್ದು, ಇದೀಗ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಹೊಸ ಪ್ರಕರಣದಡಿ ಅವರನ್ನು ಬಂಧಿಸಿ ಪಿಎಂಎಲ್ಎ ವಿಶೇಷ ಕೋರ್ಟ್ಗೆ ಹಾಜರುಪಡಿಸಲಾಯಿತು. ಅವರು ಜ. 30ರ ವರೆಗೆ ಇ.ಡಿ ವಶದಲ್ಲಿರುವಂತೆ ಕೋರ್ಟ್ ಆದೇಶಿಸಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ವಿವಾ ಗ್ರೂಪ್ನ ಪ್ರವರ್ತಕ ಹಾಗೂ ಬಹುಜನ ವಿಕಾಸ್ ಅಘಾಡಿಯ (ಬಿವಿಎ) ಮಹಾರಾಷ್ಟ್ರದ ಶಾಸಕ ಹಿತೇಂದ್ರ ಠಾಕೂರ್ ವಿರುದ್ಧ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.