ಹೈದರಾಬಾದ್, ಜ.27 (DaijiworldNews/PY): ಹದಿನೆಂಟು ಮಹಿಳೆಯರ ಹತ್ಯೆ ಸೇರಿದಂತೆ ಇತರೆ ಅಪರಾಧಗಳಲ್ಲಿ ಭಾಗಿಯಾಗಿದ್ದ ಆರೋಪದಡಿ ಸರಣಿ ಹಂತಕನನ್ನು ತೆಲಂಗಾಣದ ಹೈದರಾಬಾದ್ ನಗರದ ಜುಬಿಲಿ ಹಿಲ್ಸ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತನನ್ನು ಹೈದರಾಬಾದ್ ನಿವಾಸಿ ಮೈನಾ ರಾಮುಲು (45) ಎಂದು ಗುರುತಿಸಲಾಗಿದೆ. 20 ದಿನಗಳ ತನಿಖೆಯ ಬಳಿ ಆರೋಪಿಯನ್ನು ಸೆರೆಹಿಡಿಯಲಾಗಿದೆ.
ಇದಕ್ಕೂ ಮೊದಲು ಈತನನ್ನು 21 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧಿಸಲಾಗಿತ್ತು. ಒಂದು ಪ್ರಕರಣದಲ್ಲಿ ಈತ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ.
ರಾಮುಲು21ನೇ ವಯಸ್ಸಿನಲ್ಲಿ ವಿವಾಹವಾಗಿದ್ದು, ಸ್ವಲ್ಪ ಸಮಯದಲ್ಲಿ ಪತ್ನಿ ಆತನನ್ನು ಬಿಟ್ಟುಹೋಗಿದ್ದಳು. ಈ ಕಾರಣದಿಂದ ಆ ರಾಮುಲು ಮಹಿಳೆಯರ ವಿರುದ್ದ ದ್ವೇಷ ಸಾಧಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
2003ರಲ್ಲಿ ರಾಮುಲು ಕ್ರಿಮಿನಲ್ ಚಟುವಟಿಕೆಗಳನ್ನು ಪ್ರಾರಂಭಿಸಿದ್ದ. ಒಂಟಿ ಮಹಿಳೆಯರಿಗೆ ಹಣ ನೀಡಿ ಯಾಮಾರಿಸುವುದು, ಮಹಿಳೆಗೆ ಮದ್ಯ ಹಾಗೂ ವಿಷ ನೀಡಿ ಹತ್ಯೆ ಮಾಡುತ್ತಿದ್ದ. ನಂತರ ಅಮೂಲ್ಯವಾದ ವಸ್ತುಗಳನ್ನು ಕದಿಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.