ನವದೆಹಲಿ, ಜ.27 (DaijiworldNews/MB) : ದೆಹಲಿ-ಹರ್ಯಾಣ ಗಡಿಗಳಲ್ಲಿ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಇಂದು ಪಂಜಾಬ್ ನ ರೈತ ಮುಖಂಡರು ಭಾಷಣ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ಆಗ್ರಹಿಸಿ ಕಳೆದ ಒಂದೂವರೆ ತಿಂಗಳಿಗೂ ಅಧಿಕ ಕಾಲದಿಂದ ದೆಹಲಿಯ ಹಲವು ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಲಿರುವ ರೈತರು ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದು ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ಭಾರೀ ಸಂಘರ್ಷ ಉಂಟಾಗಿತ್ತು. ಹಲವಾರು ಮಂದಿ ಗಾಯಗೊಂಡಿದ್ದು ಈ ಬಗ್ಗೆ ಪೊಲೀಸರು 7 ಎಫ್ಐಆರ್ ದಾಖಲಿಸಿದ್ದಾರೆ. ಇನ್ನು ರೈತರ ಕೆಲ ಗುಂಪು ಭಾರತದ ಐತಿಹಾಸಿಕ ಸ್ಮಾರಕ ಕೆಂಪುಕೋಟೆಯ ಆವರಣದಲ್ಲಿ ತಮ್ಮ ಸಂಘದ ಧ್ವಜವನ್ನು ಹಾರಿಸಿದ್ದರು. ಇನ್ನು ಈ ಹಿಂಸಾಚಾರದ ವೇಳೆ 86 ಪೊಲೀಸರು ಗಾಯಗೊಂಡಿದ್ದು ಓರ್ವ ರೈತ ಟ್ಯ್ರಾಕ್ಟರ್ ಮಗುಚಿ ಸಾವನ್ನಪ್ಪಿದ್ದಾನೆ.
ಈ ವಿಚಾರಕ್ಕೆ ಸಂಬಂಧಿಸಿ ಪಂಜಾಬ್ ರೈತ ಮುಖಂಡರು ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.