ನವದೆಹಲಿ, ಜ.27 (DaijiworldNews/MB) : ''ದೇಶದ ಅನ್ನದಾತ ಎನಿಸಿಕೊಂಡವರು ಉಗ್ರಗಾಮಿಗಳಾಗಿದ್ದು ರೈತರನ್ನು ಅವಮಾನಿಸಬೇಡಿ'' ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ.
ದೆಹಲಿಯಲ್ಲಿ ಮಂಗಳವಾರ ಟ್ಯ್ರಾಕ್ಟರ್ ರ್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯರ ನೀಡಿರುವ ಅವರು, ''ಉಗ್ರರನ್ನು ಭಯೋತ್ಪಾದಕರೆಂದೇ ಕರೆಯಬೇಕು. ನಮ್ಮ ರೈತರನ್ನು ಅವಮಾನಿಸಬೇಡಿ. ದೇಶದ ಅನ್ನದಾತ ಎನಿಸಿಕೊಂಡವರು ಉಗ್ರಗಾಮಿಗಳಾಗಿದ್ದಾರೆ'' ಎಂದು ಹೇಳದ್ದರು.
ಇನ್ನು ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ, ''ಪ್ರಗತಿಪರರೆನಿಸಿಕೊಂಡ ಕೆಲವರಿಂದ ಬೆಂಬಲಿತವಾದ ಶಕ್ತಿಗಳು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದೆ. ಅದೂ ಕೂಡಾ ಸಂವಿಧಾನದ ಹೆಸರಿನಲ್ಲಿ'' ಎಂದು ಟ್ವೀಟಿಸಿದ್ದಾರೆ.
ಬಿಜೆಪಿ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗಿಯಾ, ''ದೆಹಲಿಯಲ್ಲಿ ನಡೆದ ಹಿಂಸಾಚಾರ ದೇಶದ ರೈತರು ಮಾಡಲು ಸಾಧ್ಯವೇ'' ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ, ''ರೈತ ಮುಖಂಡರನ್ನು ಹುರಿಯತ್ ನಾಯಕರಿಗೆ ಹೋಲಿಸಿದ್ದು ಯೋಗೀಂದ್ರ ಯಾದವ್, ರಾಕೇಶ್ ಟೀಕಾಯತ್ ಮತ್ತು ಹನ್ನನ್ ಮೊಲ್ಲಾ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಬೇಕು'' ಎಂದು ಆಗ್ರಹಿಸಿದ್ದಾರೆ.