ಲಖನೌ,ಜ.26 (DaijiworldNews/HR): "ಮನುಷ್ಯನ ಸಾರ್ವಜನಿಕ ಜೀವನವು ಒಂದು ಧರ್ಮಕ್ಕೆ ಪ್ರೇರಣೆ ನೀಡುತ್ತದೆ, ಅದುವೇ ರಾಷ್ಟ್ರಧರ್ಮ. ಇದು ಎಲ್ಲಕ್ಕಿಂತ ಮತ್ತು ಎಲ್ಲರಿಗಿಂತ ಮಿಗಿಲಾದದ್ದು" ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಮನುಷ್ಯರಾದ ನಾವೆಲ್ಲರೂ ವೈಯಕ್ತಿಕ ಜೀವನವನ್ನು ಮಾತ್ರ ಹೊಂದಿರುವುದಿಲ್ಲ ಬದಲಾಗಿ ಸಾರ್ವಜನಿಕ ಜೀವನವನ್ನೂ ಹೊಂದಿರುತ್ತೇವೆ. ಇದು ನಮಗೆ ರಾಷ್ಟ್ರ ಧರ್ಮಕ್ಕೆ ಪ್ರೇರಣೆ ನೀಡುತ್ತದೆ. ಇದು ಎಲ್ಲರಿಗಿಂತಲೂ ಮಿಗಿಲಾದದ್ದು. ಇದಕ್ಕಾಗಿ ನಾವು ಶ್ರದ್ಧೆಯಿಂದ ಕೆಲಸ ಮಾಡಬೇಕು" ಎಂದರು.
ಇನ್ನು ಇದೇ ವೇಳೆ ಉದ್ಯೋಗದ ಕುರಿತು ಮಾತನಾಡಿದ ಅವರು, ಉತ್ತರ ಪ್ರದೇಶ ಸರ್ಕಾರವು 4 ಲಕ್ಷ ಯುವಕರಿಗ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಯುವಕರಿಗೆ ಉಚಿತ ತರಬೇತಿ ನೀಡುವ ಕುರಿತು ಯೋಜನೆಯನ್ನೂ ಘೋಷಿಸಿದರು.