ಮಡಿಕೇರಿ, ಜ.26 (DaijiworldNews/PY): "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತುಂಬಾ ಅನುಭವಿಯಾಗಿದ್ದು, ರಾಜ್ಯದ ಅಭಿವೃದ್ದಿ ದೃಷ್ಠಿಯಿಂದ ಖಾತೆಗಳ ಬದಲಾವಣೆ ಮಾಡಲಾಗಿದೆ" ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಅಭಿವೃದ್ದಿಯ ಕಾರಣದಿಂದ ಖಾತೆ ಬದಲಾವಣೆ ಮಾಡಲಾಗಿದೆ. ಖಾತೆ ಬದಲಾವಣೆ ಮಾಡಿದ ಕಾರಣ ಮುನಿಸು ಹಾಗೂ ವ್ಯತ್ಯಾಸಗಳು ಆಗುವುದು ಸಹಜ. ಇದೆಲ್ಲವನ್ನು ಸಿಎಂ ಅವರು ಸರಿಪಡಿಸಲಿದ್ದಾರೆ. ಅವರ ತೀರ್ಮಾನ ಸರಿಯಾಗಿಯೇ ಇರುತ್ತದೆ" ಎಂದಿದ್ದಾರೆ.
"ಹಿಂದೆ ಇದ್ದ ಕಾಯ್ದೆ ಯಾವುದೋ ಬ್ರಿಟೀಷರ ಕಾಲದ ಕಾಯ್ದೆಯಾಗಿತ್ತು. ಆ ಕಾಯ್ದೆಯಿಂದ ಜನರಿಗೆ ಯಾವುದೇ ಅನುಕೂಲವಿರಲಿಲ್ಲ. ಈ ಹಿಂದೆ ಯುಪಿಎ ಸರ್ಕಾರವೇ ಕಾಯ್ದೆ ತಿದ್ದುಪಡಿ ತರಲು ಮುಂದಾಗಿದ್ದು, ಈ ವಿಚಾರವನ್ನು ಗೌಪ್ಯವಾಗಿಟ್ಟಿದ್ದರು. ನಮ್ಮ ಸರ್ಕಾರ ಅದನ್ನು ಜಾರಿಗೆ ತಂದಿದೆ. ರೈತರು ಹೋರಾಟ ಮಾಡುವುದು ಅವರ ಹಕ್ಕು. ಆದರೆ, ಶಾಂತಿಯುವಾಗಿ ಹೋರಾಟ ಮಾಡಬೇಕು" ಎಂದು ತಿಳಿಸಿದ್ದಾರೆ.