ಕೋಲ್ಕತ್ತ,ಜ.26 (DaijiworldNews/HR): ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಪ್ರಬಿರ್ ಘೋಷಾಲ್ ಪಕ್ಷದ ಎರಡು ಸ್ಥಾನಗಳಿಗೆ ಇಂದು ರಾಜೀನಾಮೆ ನೀಡಿದ್ದಾರೆ. ಆದರೆ ಅವರು ವಿಧಾನಸಭಾ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಕ್ಷೇತ್ರವಾದ ಉತ್ತರಪರದಲ್ಲಿ ಸಕ್ರಿಯವಾಗಿ ಕೆಲಸ ಮಾಡಲು ಅವಕಾಶ ಕೊಡದ ಪಕ್ಷದೊಳಗಿನ ಕೆಲವರ ಲಾಬಿಯಿಂದಾಗಿ ಹೂಗ್ಲಿ ಜಿಲ್ಲಾ ಸಮಿತಿ ಹಾಗೂ ಟಿಎಂಸಿ ವಕ್ತಾರ ಎರಡೂ ಹುದ್ದೆಗಳಿಗೆ ನನ್ನಿಂದ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ. ಆದರೆ ಜನರ ಅಗತ್ಯಗಳನ್ನು ಮನದಲ್ಲಿಟ್ಟುಕೊಂಡು ಶಾಸಕನಾಗಿ ಮುಂದುವರಿದಿದ್ದೇನೆ" ಎಂದರು.
ಇನ್ನು "ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಚುನಾವಣೆ ನಡೆಯಲಿರುವುದರಿಂದ ಅದಕ್ಕೂ ಮುನ್ನ ನಾನು ಟಿಎಂಸಿಯಿಂದ ನಿರ್ಗಮಿಸುವುದಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.