ರಾಯಚೂರು, ಜ.26 (DaijiworldNews/PY): "ಖಾತೆ ವಿಚಾರವಾಗಿ ಕೆಲವರಿಗೆ ಆಸಕ್ತಿ, ಹವ್ಯಾಸ ಇರುವ ಕಾರಣ ಹವ್ಯಾಸಕ್ಕೆ ಅನುಗುಣವಾಗಿ ಬೇಡಿಕೆ ಇಟ್ಟಿರುತ್ತಾರೆ. ಅದನ್ನು ಸರಿದೂಗಿಸುವ ಕಾರ್ಯವನ್ನು ಸಿಎಂ ಅವರು ಮಾಡಿದ್ದಾರೆ" ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಎಲ್ಲವೂ ಕೂಡಾ ಸರಿಯಾದ ರೀತಿಯಲ್ಲಿದೆ. ನಮ್ಮ ಸರ್ಕಾರ ಸುಭದ್ರವಾಗಿದೆ" ಎಂದು ತಿಳಿಸಿದರು.
"ಕೆಲವು ರಾಜಕೀಯ ಪಕ್ಷಗಳು ರೈತರ ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಇಂದು ನಡೆದ ಟ್ಯ್ರಾಕ್ಟರ್ ರ್ಯಾಲಿ ರಾಜಕೀಯ ಪ್ರೇರಿತವಾದುದು" ಎಂದರು.
"ಶಾಲಾ-ಕಾಲೇಜು ಪ್ರಾರಂಭಿಸಿದ ಕಾರಣ ಈ ಹಿಂದೆ ಗ್ರಾಮೀಣ ಭಾಗಕ್ಕೆ ಸಂಚರಿಸುತ್ತಿದ್ದ ರೀತಿಯಲ್ಲೇ ಬಸ್ಗಳನ್ನು ಓಡಿಸಲು ನಿರ್ದೇಶನ ನೀಡಲಾಗಿದೆ. ಬಸ್ ಪಾಸ್ ವಿತರಣೆ ಗೊಂದಲವಾಗುತ್ತಿರುವ ಹಿನ್ನೆಲೆ ಹಳೆಯ ಪಾಸ್ಗಳನ್ನು ಪರಿಗಣಿಸಲು ತಿಳಿಸಲಾಗಿದೆ" ಎಂದು ಹೇಳಿದರು.