ನವದೆಹಲಿ, ಜ.26 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದತಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಟ್ರಾಕ್ಟರ್ ರ್ಯಾಲಿಯ ಸಂದರ್ಭ ಪೊಲೀಸರು ಹಾಗೂ ರೈತರ ನಡುವೆ ಭಾರೀ ಘರ್ಷಣೆ ಉಂಟಾಗಿದೆ.
ಪೊಲೀಸರು ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿ, ಲಾಠಿ ಚಾರ್ಜ್ ಮಾಡಿದ್ದು ಟ್ರಾಕ್ಟರ್ನಲ್ಲಿದ್ದ ರೈತರನ್ನು ಕೆಳಗಿಳಿಸಿ ಲಾಠಿ ಬೀಸಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ರೈತರ ನಡುವೆ ಭಾರೀ ಷರ್ಘಣೆ ಉಂಟಾಗಿದ್ದು ರೈತರು ಟ್ರಾಕ್ಟರ್ಗಳನ್ನೇ ಪೊಲೀಸರತ್ತ ನುಗ್ಗಿಸಿದ್ದಾರೆ.
ಟ್ರ್ಯಾಕ್ಟರ್ ರ್ಯಾಲಿಯನ್ನು ತಡೆಯಲೆಂದು ಪೊಲೀಸರು ಬಸ್ ಹಾಗೂ ಟ್ಯಾಂಕರ್ಗಳನ್ನು ಅಡ್ಡಲಾಗಿಟ್ಟಿದ್ದು, ಇವುಗಳನ್ನು ಟ್ರಾಕ್ಟರ್ ಮೂಲಕ ಬದಿಗೆ ತಳ್ಳಿ ರೈತರು ಮುನ್ನುಗ್ಗಲು ಮುಂದಾಗಿದ್ದಾರೆ. ಅಡ್ಡಲಾಗಿರಿಸಿದ ಬಸ್ಗಳನ್ನು ಟ್ರಾಕ್ಟರ್ ಮೂಲಕ ಬದಿಗೆ ತಳ್ಳಿದ್ದಾರೆ.
ರೈತರು ಬ್ಯಾರಿಕೇಡ್ ದಾಟಿ ಮುನ್ನುಗ್ಗುವ ಯತ್ನ ಮಾಡುತ್ತಿದ್ದು ಪೊಲೀಸರು, ರೈತರ ನಡುವೆ ಭಾರೀ ಸಂಘರ್ಷ ಉಂಟಾಗಿದೆ.