ಬೀದರ್, ಜ.26 (DaijiworldNews/HR): ಅಧಿಕಾರಿಗಳ ಕಿರುಕುಳ ತಾಳಲಾರದೆ ಚಿಟಗುಪ್ಪ ಪುರಸಭೆ ಪೌರಕಾರ್ಮಿಕನೊಬ್ಬ ಪುರಸಭೆ ಎದುರಿಗೆ ಅಧಿಕಾರಿಗಳು ಹಾಗೂ ಆಡಳಿತ ಸಿಬ್ಬಂದಿಗಳ ಸಮ್ಮುಖದಲ್ಲಿಆತ್ಮಹತ್ಯೆಗೆ ಯತ್ನಿಸಿದ ಘಟನೆ ಗಣರಾಜ್ಯೋತ್ಸವ ದಿನದಂದು ನಡೆದಿದೆ.
ಸಾಂಧರ್ಭಿಕ ಚಿತ್ರ
ಆತ್ಮಹತ್ಯೆಗೆ ಯತ್ನಿಸಿದವನನ್ನು ಪುರಸಭೆಯಲ್ಲಿ ಪೌರಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿರುವ ರಾಘವೆಂದ್ರ ಎಂದು ಹೇಳಲಾಗಿದೆ.
ಇನ್ನು ಕಳೆದ ಕೆಲ ತಿಂಗಳಿಂದ ಸಂಬಳಕ್ಕಾಗಿ ಮುಖ್ಯಾಧಿಕಾರಿ ಹಾಗೂ ಇತರೆ ಸಿಬ್ಬಂದಿಗಳು ಕಿರುಕುಳ ನೀಡಿದ್ದಾರೆಂದು ಆರೋಪಿಸುತ್ತಿರುವ ಬಗ್ಗೆ ಸಿಬ್ಬಂದಿಗಳು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.