ಕೊಪ್ಪಳ, ಜ.26 (DaijiworldNews/HR): "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿದವರ ಪ್ರಚೋದನೆಯಿಂದಾಗಿ ಇಂದು ರೈತರು ಪರೇಡ್ ನಡೆಸುತ್ತಿದ್ದಾರೆ" ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದಾಗಿ ಪೊಲೀಸರು ರೈತರ ಟ್ರ್ಯಾಕ್ಟರ್ ಪರೇಡ್ ತಡೆದಿದ್ದಾರೆ. ನಮ್ಮ ಸರ್ಕಾರ ತಂದಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿದ್ದು, ಅವರಿಗಾಗಿಯೇ ಕಾಯ್ದೆ ತರಲಾಗಿದೆ. ಆದರೆ ನಮ್ಮನ್ನು ವಿರೋಧಿಸುವ ಕೆಲವರು ರೈತರಿಗೆ ಪ್ರಚೋದನೆ ಮಾಡಿದ್ದರಿಂದ ಇಂದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದರು.
ಇನ್ನು " ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಹಾಗೂ ಸಂಚಾರ ವ್ಯವಸ್ಥೆ ಸುಗಮವಾಗಬೇಕು ಎನ್ನುವ ಕಾರಣಕ್ಕೆ ಪೊಲೀಸರು ರೈತರ ಟ್ರ್ಯಾಕ್ಟರ್ ಗಳನ್ನ ತಡೆದಿರಬಹುದು" ಎಂದು ಹೇಳಿದ್ದಾರೆ.