ದೊಡ್ಡಬಳ್ಳಾಪುರ,ಜ.26 (DaijiworldNews/HR): "ಶಿವಮೊಗ್ಗದ ಗಣಿಯಲ್ಲಿ ನಡೆದ ಸ್ಫೋಟ ಕುರಿತಂತೆ ಅಕ್ರಮ ಸಕ್ರಮ ಮಾಡುವಂತೆ ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ಸರಿಯಲ್ಲ, ಅವರು ಗಣಿ ಲೂಟಿಕಾರರಿಗೆ ಬೆಂಬಲ ನೀಡುತ್ತಿದ್ದು, ರಾಜ್ಯದಲ್ಲಿ ಹಿಂದೆ ಗಣಿ ದಣಿಗಳಿಂದಲೇ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದರು" ಎಂದರು.
ಈ ಕುರಿತು ಮಾತನಾಡಿದ ಅವರು, "ಶಿವಮೊಗ್ಗದ ನಡೆದ ಗಣಿ ಸ್ಫೋಟದಲ್ಲಿ ಮೃತಪಟ್ಟ ಕುಟುಂಬದವರಿಗೆ ಈಗಾಗಲೇ 5ಲಕ್ಷ ಹಣ ಕೊಟ್ಟಿದ್ದಾರೆ. ಆದರೆ ಆ ಹಣ ಅವರ ಕುಟುಂಬಸ್ಥರಿಗೆ ಸಾಲದು ಇನ್ನು ಹೆಚ್ಚಿನ ಪರಿಹಾರ ನೀಡಬೇಕಿದೆ" ಎಂದರು.
ಇನ್ನು ರೈತರ ಹೋರಾಟದ ಕುರಿತು ಮಾತನಾಡಿದ ಅವರು, "ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ನಮ್ಮ ಬೆಂಬಲವಿದೆ, ರಾಜ್ಯದಲ್ಲಿ ರೈತರ, ಕನ್ನಡಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ" ಎಂದು ಹೇಳಿದ್ದಾರೆ.