ಮಂಗಳೂರು, ಜ.26 (DaijiworldNews/MB) : 72 ನೇ ಗಣರಾಜ್ಯೋತ್ಸವವನ್ನು ಜನವರಿ 26 ರ ಮಂಗಳವಾರ ನೆಹರೂ ಮೈದಾನದಲ್ಲಿ ದೇಶಭಕ್ತಿಯ ಉತ್ಸಾಹದೊಂದಿಗೆ ಆಚರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಭಾರತೀಯ ತ್ರಿವರ್ಣ ಧ್ವಜಾರೋಹಣ ಮಾಡಿದರು.
ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ, "2020 ರವರೆಗೆ 43,939 ಫಲಾನುಭವಿಗಳು ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ನಿರ್ಮಾಣಕ್ಕಾಗಿ 19 ತಾಣಗಳನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅನುಮೋದಿಸಿದೆ. 2020-21ರ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಕಾಲನಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು 280 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಪಾಲಿಕೆಯ 100 ಕೋಟಿ ರೂ.ಗಳ ನಗರೋತ್ಥಾನ ಯೋಜನೆಯಡಿ 137 ಕಾಮಗಾರಿಗಳು ಪೂರ್ಣಗೊಂಡಿವೆ ಮತ್ತು ಐದು ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ'' ಎಂದು ಹೇಳಿದರು.
"ಮೀನುಗಾರರ ದೋಣಿಗಳಿಗೆ ಡೀಸೆಲ್ ಸಬ್ಸಿಡಿಗಾಗಿ ಸರ್ಕಾರ 915 ಲಕ್ಷ ರೂ. ಒದಗಿಸಲಾಗಿದೆ. ಉಳಿತಾಯ ಮತ್ತು ಪರಿಹಾರಕ್ಕಾಗಿ 2,943 ಲಕ್ಷ ರೂ. ಒದಗಿಸಲಾಗಿದೆ. ವಿಪತ್ತು ಪರಿಹಾರ ನಿಧಿಯಡಿ 16 ಲಕ್ಷ ರೂ. ನೀಡಲಾಗಿದೆ. ಐಸ್ ಪ್ಲಾಂಟ್ಗಳಿಗೆ 56 ಲಕ್ಷ ರೂ. ಸಬ್ಸಿಡಿ ನೀಡಲಾಗಿದೆ. ಪಶ್ಷಿಮವಾಹಿಣಿ ಯೋಜನೆಯಡಿ 1 ಕೆಲಸ ಪೂರ್ಣಗೊಂಡಿದ್ದು, 10 ಕಾಮಗಾರಿಗಳು ಪ್ರಗತಿಯಲ್ಲಿವೆ'' ಎಂದು ತಿಳಿಸಿದರು.
''ಭೌಗೋಳಿಕವಾಗಿ, ದಕ್ಷಿಣ ಕನ್ನಡ 4,77,149 ಚದರ ಹೆಕ್ಟೇರ್ ಹೊಂದಿದೆ. 2011 ರ ಜನಗಣತಿಯ ಪ್ರಕಾರ 10,32,577 ಪುರುಷರು, 10,51,048 ಮಹಿಳೆಯರು ಇದ್ದಾರೆ. 7 ತಾಲ್ಲೂಕುಗಳು, 331 ಗ್ರಾಮಗಳು ಮತ್ತು 230 ಗ್ರಾಮ ಪಂಚಾಯಿತಿಗಳು, 5 ಪಟ್ಟಣ ಪಂಚಾಯಿತಿಗಳು ಮತ್ತು 477 ನ್ಯಾಯಯುತ ಬೆಲೆ ಅಂಗಡಿಗಳಿವೆ. ಜಿಲ್ಲೆಯಲ್ಲಿ ಪ್ರವಾಹದ ಸಂದರ್ಭದಲ್ಲಿ ಮೂಲ ಸೌಲಭ್ಯ ಮತ್ತು ರಸ್ತೆ ದುರಸ್ತಿ ನಡೆಸಲು ಸರ್ಕಾರ 3,500 ಲಕ್ಷ ರೂ. ಒದಗಿಸಿದೆ. ಪ್ರವಾಹ ಪೀಡಿತರ ಪುನರ್ವಸತಿ ಕಾರ್ಯಕ್ರಮದಡಿ ರಾಜೀವ್ ಗಾಂಧಿ ವಸತಿ ನಿಗಮ 1.8881 ಕೋಟಿ ರೂ. ನೀಡಿದೆ. 2020 ರ ಏಪ್ರಿಲ್ 1 ರಿಂದ ಡಿಸೆಂಬರ್ 31 ರವರೆಗೆ ತೋಟಗಾರಿಕೆ ಇಲಾಖೆಯ ನೈಸರ್ಗಿಕ ವಿಪತ್ತುಗಳ ಅಡಿಯಲ್ಲಿ 485 ರೈತರಿಗೆ 10.4077 ಲಕ್ಷ ರೂ. ನೀಡಿದೆ'' ಎಂದು ಹೇಳಿದರು.
"2020 ರ ಡಿಸೆಂಬರ್ 31 ರವರೆಗೆ ಸರ್ಕಾರವು ಕಂದಾಯ ಇಲಾಖೆಯ ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರತಿ ಪ್ರಕರಣಕ್ಕೆ 20,000 ರೂ. ವಿತರಿಸಿದೆ. 2021 ರವರೆಗೆ ಸರ್ಕಾರ ತಹಶೀಲ್ದಾರ್ ಅವರ ಮಾರ್ಗದರ್ಶನದಂತೆ 90.80 ಲಕ್ಷ ರೂ. ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ 3,502 ಪ್ರಕರಣಗಳು ಅನುಮೋದನೆ ನೀಡಲಾಗಿದ್ದು ಅನುದಾನ ವಿತರಣೆ ಬಾಕಿ ಇದೆ. 700.40 ಲಕ್ಷ ರೂ.ಗಳ ಅವಶ್ಯಕತೆಯಿದೆ. ಸಾಮಾಜಿಕ ಭದ್ರತೆಯಡಿಯಲ್ಲಿ ಪಿಂಚಣಿ ಅರ್ಜಿಯನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಲಾಗಿದೆ. 2021 ರ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಶೇ. 75 ಹಾಗೂ ಆರ್ಥಿಕವಾಗಿ ಶೇ. 70 ಗುರಿ ಸಾಧಿಸಲಾಗಿದೆ'' ಎಂದು ವಿವರಿಸಿದರು.
"ಬಹು-ಗ್ರಾಮ ಕುಡಿಯುವ ನೀರಿನ ಯೋಜನೆಯ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿವೆ. ವಸತಿ ಇಲಾಖೆಯಡಿ 1,173 ಮನೆಗಳು ಪೂರ್ಣಗೊಂಡಿವೆ ಮತ್ತು 5,744 ಮನೆಗಳ ಕಾಮಗಾರಿಗಳು ಬಾಕಿ ಉಳಿದಿವೆ. ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ 2021 ರಲ್ಲಿ 1,586 ಸಂಪರ್ಕ ಮಾಡಲಾಗಿದೆ'' ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ್ ಕಾಮತ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಮೇಯರ್ ದಿವಾಕರ್ ಪಾಂಡೇಶ್ವರ ಮತ್ತು ಇತರರು ಉಪಸ್ಥಿತರಿದ್ದರು.