ಬೆಂಗಳೂರು,ಜ.26 (DaijiworldNews/HR): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಒಂದು ದಿನದಲ್ಲಿ ಎರಡು ಬಾರಿಗೆ ಮತ್ತು ಕಳೆದ ಐದು ದಿನಗಳಲ್ಲಿ ನಾಲ್ಕನೇ ಬಾರಿಗೆ ತಮ್ಮ ಸಂಪುಟವನ್ನು ಪುನರ್ರಚಿಸಿದ್ದಾರೆ.
ಯಡಿಯೂರಪ್ಪ ಅವರು ಸಣ್ಣ ನೀರಾವರಿ ವಿಭಾಗವನ್ನು ಜೆ.ಸಿ.ಮಾಧುಸ್ವಾಮಿಗೆ ಮರುಹಂಚಿಕೆ ಮಾಡಿದ್ದು, ಅವರ ಖಾತೆಯನ್ನು ನಾಲ್ಕು ಬಾರಿ ಬದಲಾಯಿಸಲಾಗಿದೆ. ಹೊಸದಾಗಿ ಸೇರ್ಪಡೆಗೊಂಡ ಸಚಿವ ಸಿ.ಪಿ. ಯೋಗಿಶ್ವರ್ ಅವರಿಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಲಾಗಿದೆ.
ಜನವರಿ 21 ರಂದು ಜೆ.ಸಿ.ಮಾಧುಸ್ವಾಮಿ ಅವರನ್ನು ಕಾನೂನು ಶಿಕ್ಷಣ ಖಾತೆಯಿಂದ ತೆಗೆದು ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಖಾತೆಗಳನ್ನು ನೀಡಲಾಯಿತು, ಮತ್ತೆ ಜನವರಿ 22 ರಂದು ಮತ್ತೆ ಅವರನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆಯಿಂದ ತೆಗೆದು ಮತ್ತು ಹಜ್ ಮತ್ತು ವಕ್ಫ್ ಖಾತೆ ನೀಡಲಾಯಿತು. ಜನವರಿ 25 ರಂದು ಮತ್ತೆ ತಮ್ಮ ಖಾತೆಗಗಳನ್ನು ಗಂಟೆಗಳಲ್ಲಿ ತೆಗೆದು ಹಾಕಿ ಸಣ್ಣ ನೀರಾವರಿ ನೀಡಲಾಯಿತು.
ಜನವರಿ 21 ರಂದು ಯಡಿಯೂರಪ್ಪ ಅವರು ತಮ್ಮ ಮೊದಲ ಸಂಪುಟ ಪುನರ್ರಚನೆಯನ್ನು ಕೈಗೊಂಡಿದ್ದು, ಹೊಸದಾಗಿ ಸೇರ್ಪಡೆಗೊಂಡ ಏಳು ಮಂತ್ರಿಗಗಳಿಗೆ ಖಾತೆ ಹಂಚಿಕೆ ಮಾಡಿದ್ದರು.
ಜನವರಿ 14 ರಂದು ತಮ್ಮ ಸಚಿವ ಸಂಪುಟ ವಿಸ್ತರಣೆ ಕೈಗೊಳ್ಳುವ ಮೊದಲೇ ಯಡಿಯೂರಪ್ಪ ಅವರು ಪಕ್ಷ ಮತ್ತು ಕೇಂದ್ರ ನಾಯಕತ್ವದೊಂದಿಗೆ ಚರ್ಚಿಸಿ ಬಳಿಕ ನಿರ್ಧಾರ ಕೈಗೊಂಡಿದ್ದಾರೆ.
ಖಾತೆಗಳನ್ನು ಮರುಹಂಚಿಕೆ ಮಾಡುವ ನಾಲ್ಕನೇ ಸುತ್ತಿನ ಬಳಿಕ ಇದು ಕೊನೆಯ ಪುನರ್ರಚನೆಯಾಗಲಿದೆಯೇ ಅಥವಾ ಮುಂಬರುವ ದಿನಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ನಿರೀಕ್ಷಿಸಬಹುದೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.