ನವದೆಹಲಿ, ಜ.26 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಪೈಕಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಪಂಜಾಬ್ ರೈತರು ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್ ಮೂಲಕ ದೆಹಲಿಗೆ ಆಗಮಿಸುತ್ತಿದ್ದಾರೆ.
ಸಾಂಧರ್ಭಿಕ ಚಿತ್ರ
ವಿವಿಧ ಹಳ್ಳಿಗಳಿಂದ ದೆಹಲಿಗೆ ಆಗಲಿಸುತ್ತಿರುವ ಟ್ರ್ಯಾಕ್ಟರ್ಗಳು ವೆಸ್ಟರ್ನ್ ಪೆರಿಫೆರಲ್ ಎಕ್ಸ್ಪ್ರೆಸ್ವೇಗೆ ಒಟ್ಟಾಗಿ ಸೇರುತ್ತಿದ್ದು, ಅದು ಚುಕ್ಕಿಯಂತೆ ಕಾಣುತ್ತಿವೆ. ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಕುಂಡ್ಲಿ ಮತ್ತು ಮುರ್ತಾಲ್ ನಡುವಿನ ವಿಶಾಲವಾದ ಪ್ರದೇಶದಲ್ಲಿ ಟ್ರಾಕ್ಟರುಗಳ ಕಾಣುತ್ತಿವೆ.
ಇನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಟ್ರ್ಯಾಕ್ಟರ್ಗಳು ಒಟ್ಟಿಗೆ ಸೇರುತ್ತಿದ್ದು, ಇದೊಂದು ಐತಿಹಾಸಿಕ ಘಟನೆಯಾಗಲಿದೆ.
ದೆಹಲಿಗೆ ಇನ್ನೂ ಕೆಲವೇ ಗಂಟೆಗಳಲ್ಲಿ ತಲುಪಲಿರುವ ಈ ಲಕ್ಷಾಂತರ ಟ್ರ್ಯಾಕ್ಟರ್ಗಳು ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗವಹಿಸಲಿದೆ ಎನ್ನಲಾಗಿದೆ.