ಬೆಂಗಳೂರು, ಜ.26 (DaijiworldNews/MB) : ''ರೈತರ ಟ್ರ್ಯಾಕ್ಟರ್ ರ್ಯಾಲಿ ತಡೆದರೆ, ಜೈಲ್ ಭರೋ ಚಳುವಳಿ ನಡೆಸಲಾಗುವುದು'' ಎಂದು ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ''ಎಲ್ಲ ನಾಗರಿಕರಿಗೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವ ಹಕ್ಕಿದೆ. ರೈತರಿಗೆ ರಾಜ್ಯ ಸರ್ಕಾರ ಬೆಂಬಲ ನೀಡಬೇಕು, ಹಾಗೆಯೇ ಪೊಲೀಸರು ರಾಜ್ಯ ಸರ್ಕಾರ ಕೈಗೊಂಬೆಯಾಗಬಾರದು'' ಎಂದು ಹೇಳಿದರು.
''ರೈತರ ಪ್ರತಿಭಟನೆಗೆ ಸುಪ್ರೀಂಕೋರ್ಟ್ ಕೂಡ ನಿರ್ಬಂಧಿಸಿಲ್ಲ'' ಎಂದು ಹೇಳಿದ ಅವರು, ''ಗಣರಾಜ್ಯೋತ್ಸವ ದಿನದಂದು ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದರೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಎದುರಾಗಲಿದೆ'' ಎಂಬ ಸುದ್ದಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
''ಜನವರಿ 26 ಸರ್ಕಾರಿ ರಜೆಯಲ್ಲವೇ'' ಎಂದು ಕೇಳಿದ ಅವರು, ''ಬೆಂಗಳೂರಿಲ್ಲಿ ನಡೆಯಲಿರುವ ಪ್ರತಿಭಟನೆಗೆ ರೈತರು ಟ್ರ್ಯಾಕ್ಟರ್ ಸಮೇತ ಬರಲಿದ್ದಾರೆ. ಪೊಲೀಸರು ತಡೆದರೆ ನಾವು ಜೈಲ್ ಭರೋ ಚಳುವಳಿ ನಡೆಸಲಾಗುವುದು. ಸರ್ಕಾರ ರೈತರ ಬಾಯಿ ಮುಚ್ಚಿಸುವ ಕೆಲಸ ಮಾಡುವುದು ಬೇಡ. ಎಲ್ಲರಿಗೂ ನೋವು ಹೇಳಿಕೊಳ್ಳುವ ಹಕ್ಕಿದೆ'' ಎಂದು ಹೇಳಿದರು.