ಮಂಗಳೂರು, ಜ 25(DaijiworldNews/SM): ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ ಜಿಲ್ಲೆಯಲ್ಲಿ ಸೋಮವಾರ 31 ಹೊಸ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 33,634ಕ್ಕೆ ಏರಿಕೆಯಾಗಿದೆ. ಈ ಪೈಕಿ 277 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ.
ಒಟ್ಟು 5,13,735 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 4,80,101 ಮಂದಿಯ ವರದಿ ನೆಗೆಟಿವ್ ಆಗಿದೆ. ಜಿಲ್ಲೆಯಲ್ಲಿ ಒಟ್ಟು 32618 ಮಂದಿ ಗುಣಮುಖರಾಗಿದ್ದು, ಸೋಮವಾರದಂದು 34 ಜನರನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯ ತನಕ ಒಟ್ಟು 739 ಸಾವುಗಳು ಸಂಭವಿಸಿವೆ.
ಉಡುಪಿ ಜಿಲ್ಲೆಯ ಇಂದಿನ ಕೊರೋನಾ ವರದಿ:
ಸೋಮವಾರ ಮೂರು ಹೊಸ ಪ್ರಕರಣಗಳು ಸೇರಿದಂತೆ ಜಿಲ್ಲೆಯ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 23,275ಕ್ಕೆ ಏರಿಕೆಯಾಗಿದೆ. ಈ ಪೈಕಿ 40 ಪ್ರಕರಣಗಳು ಪ್ರಸ್ತುತ ಸಕ್ರಿಯವಾಗಿವೆ. ಈವರೆಗೆ 3,29,707 ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ 3,06,432 ಮಾದರಿಗಳು ನಕಾರಾತ್ಮಕವಾಗಿವೆ. ಸೋಮವಾರ ಏಳು ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಗುಣಮುಖರಾದವರ ಸಂಖ್ಯೆ 23,046ಕ್ಕೆ ಏರಿಕೆಯಾಗಿದೆ.
ಈವರೆಗೆ ಜಿಲ್ಲೆಯಲ್ಲಿ ಒಟ್ಟು 189 ಸಾವುಗಳು ಸಂಭವಿಸಿವೆ.