ತೊಕ್ಕೊಟ್ಟು, ಜ 25(DaijiworldNews/SM): ಸಾಮಾಜಿಕ ಜಾಲ ತಾಣಗಳಲ್ಲಿ ಸದ್ದು ಮಾಡುತ್ತಿರುವ ತಾಂಟ್ ರೇ ತಾಂಟ್ ಹೇಳಿಕೆ ಕೊಟ್ಟ ರಿಯಾಝ್ ಫರಂಗಿಪೇಟೆ ವಿರುದ್ಧ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೊಕ್ಕೊಟ್ಟುವಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ರಿಯಾಝ್ ಫರಂಗಿಪೇಟೆಗೆ ಟಾಂಗ್ ಕೊಟ್ಟಿದ್ದಾರೆ.
ನಳಿನ್ ಕಟೀಲ್, ಹರೀಶ್ ಪೂಂಜಾ, ಭರತ್ ಶೆಟ್ಟಿ ಸರಿಯಾಗಿ ನಿಂತು ಮೈ ನೀರು ಹೊರ ಹಾಕಿದ್ದಲ್ಲಿ ನಿನ್ನ ಅಡ್ರೆಸ್ ಇರಲ್ಲ. ಅಂತಹದರಲ್ಲಿ ತಾಂಟ್ ರೇ ಬಾ ತಾಂಟ್ ಎನ್ನುತ್ತಿದ್ದಿಯಲ್ಲ. ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದಿರುವುದು ಕೆಲವೇ ಕೆಲವು ಸೀಟುಗಳನ್ನು, ಆದರೆ ಇಡೀ ರಾಜ್ಯ ಗೆದ್ದಂತೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನೀವು ಗೆದ್ದಿರುವುದು ನಿಮ್ಮ ಕ್ಷೇತ್ರದಲ್ಲಿ ತಾಕತ್ತಿದ್ದಲ್ಲಿ ನನ್ನ ಕ್ಷೇತ್ರದಲ್ಲಿ ನಿಂತು ಗೆದ್ದು ತೋರಿಸು ಎಂಬುವುದಾಗಿಯೂ ಶ್ರೀಗಳು ಸವಾಲೆಸೆದಿದ್ದಾರೆ. ರಿಯಾಝ್ ಫರಂಗಿಪೇಟೆ ನಿಜವಾಗಿಯೂ ಫರಂಗಿಪೇಟೆಯಲ್ಲಿಲ್ಲ. ಯಾವುದೋ ಇತರ ಭಾಗದಲ್ಲಿದ್ದಾನೆ. ಆದರೆ, ಫರಂಗಿಪೇಟೆಯ ಹೆಸರನ್ನು ಕೆಡಿಸುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.