ಇಂಧೋರ್,ಜ.25 (DaijiworldNews/HR): "ಜನರನ್ನು ದಿಕ್ಕು ತಪ್ಪಿಸಿ ಅವರ ಗಮನವನ್ನು ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯುವ ಪ್ರಯುತ್ನವನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಡುತ್ತಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಜನರು ಮುಖ್ಯಮಂತ್ರಿಯವರ ಸುಳ್ಳುಗಳನ್ನು ಅರ್ಥಮಾಡಿಕೊಳ್ಳಬೇಕು. ಅವರು ಸುಳ್ಳುಗಳನ್ನು ಹೇಳದೇ ಆಹಾರವನ್ನು ಜಿರ್ಣಿಸಿಕೊಳ್ಳಲಾರರು. ಅವರು ಪ್ರತಿ ದಿನ ಹೊಸ ಸುಳ್ಳು ಹೇಳುತ್ತಾರೆ. ಈ ಹಿಂದೆ ಅವರು ಇನ್ನೂ ಜಾರಿಯಾಗದ ಸರಿಸುಮಾರು 15,000 ಘೋಷಣೆಗಳನ್ನು ಮಾಡಿದ್ದಾರೆ. ರಾಜ್ಯದ ಜನರು)ಅವರು ಮಾಡುತ್ತಿರುವ ರಾಜಕೀಯವನ್ನು ಅರ್ಥಮಾಡಿಕೊಳ್ಳಬೇಕು" ಎಂದರು.
ಇನ್ನು "ಬಿಜೆಪಿಯು ಯುವಕರ ಗಮನವನ್ನು ದೇಶದ ನಿಜವಾದ ಸಮಸ್ಯೆಗಳ ಬದಲು ಬೇರೆಡೆಗೆ ತಿರುಗಿಸುತ್ತಿದ್ದು, ಬಿಜೆಪಿ ಯಾವೊಬ್ಬ ಸ್ವಾತಂತ್ರ್ಯ ಹೋರಾಟಗಾರರನ್ನೂ ಹೊಂದಿಲ್ಲ. ಅವರು ದೇಶಭಕ್ತಿಯ ಹೆಸರಲ್ಲಿ ಜನರ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.