ಭೂಪಾಲ್, ಜ.25 (DaijiworldNews/HR): ಕೊಲ್ಕತ್ತಾದಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದು, ಇದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದರು, ಇದೀಗ ಆ ಕಾರಣಕ್ಕಾಗಿ ಮಧ್ಯ ಪ್ರದೇಶ ವಿಧಾನಸಭಾ ಹಂಗಾಮಿ ಸ್ಪೀಕರ್ ರಾಮೇಶ್ವರ್ ಶರ್ಮಾ ಮಮತಾ ಬ್ಯಾನರ್ಜಿಗೆ ರಾಮಾಯಣದ ಪ್ರತಿಯೊಂದನ್ನು ಕೋರಿಯರ್ ಮೂಲಕ ಕಳುಹಿಸಿದ್ದಾರೆಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ರಾಮೇಶ್ವರ್ ಶರ್ಮಾ, "ಭಾರತ ದೇಶ ಭಗವಂತ ರಾಮನಿಗೆ ಸೇರಿದ್ದು, ರಾಮನನ್ನು ಯಾರೆಲ್ಲ ಕಿಲಾಗಿ ಕಂಡಿದಾರೋ ಅವರೆಲ್ಲರು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಅಂತೆಯೇ ಮಮತಾ ಬ್ಯಾನರ್ಜಿ ಅವರು ಕೂಡಾ ತಮ್ಮ ತಪ್ಪನ್ನು ಅರಿತು ರಾಮಾಯಾಣವನ್ನು ಓದಲು ಪ್ರಾರಂಭಿಸುತ್ತಾರೆ ಎಂಬ ನಂಬಿಕೆಯಿಂದ ರಾಮಾಯಣ ಪ್ರತಿಯನ್ನು ಕಳುಹಿಸಿ ಕೊಟ್ಟಿದ್ದೇನೆ" ಎಂದರು.
ಇನ್ನು ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನದಲ್ಲಿ ಶ್ರೀರಾಮ ಉಲ್ಲೇಖಿಸಿದ್ದು, ಮಹಾತ್ಮ ಗಾಂಧಿ ಭಾರತವನ್ನು ರಾಮ ರಾಜ್ಯ ಮಾಡಲು ಸಂಕಲ್ಪ ತೊಡುವಂತೆ ಹೇಳುತ್ತಾರೆ. ಆದರೆ ಮಮತಾ ಜೈ ಶ್ರೀರಾಮ್ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದರೆ ಆಶ್ಚರ್ಯ ಮತ್ತು ನೋವುಂಟಾಗಿದೆ" ಎಂದು ಹೇಳಿದ್ದಾರೆ.