ಹೈದರಾಬಾದ್, ಜ.25 (DaijiworldNews/HR): ಕಳೆದ ವಾರ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ತೆಲಂಗಾಣದ ವಾರಂಗಲ್ ಜಿಲ್ಲೆಯ ಅಂಗನವಾಡಿ ಶಿಕ್ಷಕಿಯೊಬ್ಬರು ಎದೆನೋವಿನಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಜನವರಿ 19ರಂದು ವಾರಂಗಲ್ನ ಶ್ಯಾಮ್ ಪೇಟೆಯ ಅಂಗನವಾಡಿ ಶಿಕ್ಷಕಿಯೊಬ್ಬರು ಲಸಿಕೆ ಹಾಕಿಸಿಕೊಂಡಿದ್ದು, ಶನಿವಾರಂದು ಕೆಲವು ಔಷಧಿಗಳನ್ನು ಪಡೆದಿದ್ದಾರೆ. ಬಳಿಕ ಎದೆನೋವು ಕಾಣಿಸಿಕೊಂಡಿದ್ದರಿಂದ ಮಲಗಿದ್ದು, ಭಾನುವಾರ ಬೆಳಗ್ಗೆ ಅವರು ಮೃತಪಟ್ಟಿರುವುದಾಗಿ ತಿಳಿಸು ಬಂದಿದೆ.
ಇನ್ನು ಶಿಕ್ಷಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಹಾತ್ಮಾ ಗಾಂಧಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದ್ದು, ಸಾವಿನ ಕಾರಣ ಪತ್ತೆಗೆ ಪ್ರಯೋಗಾಲಯ ಮಾದರಿ ಸಂಗ್ರಹಿಸಲಾಗಿದೆ ಎಂದು ಆಸ್ಪತ್ರೆ ಮುಖ್ಯಸ್ಥ ನಾಗಾರ್ಜುನ ರೆಡ್ಡಿ ಹೇಳಿದ್ದಾರೆ.