ಬೆಳ್ತಂಗಡಿ, ಜ 24(DaijiworldNews/SM): ಉಜಿರೆಯಲ್ಲಿ ಶನಿವಾರ ರಾತ್ರಿ ಇತ್ತಂಡಗಳ ನಡುವೆ ಗಲಾಟೆ ನಡೆದಿದೆ. ಓರ್ವ ಯುವಕನಿಗೆ ಮತ್ತೊಂದು ತಂಡ ಹಿಗ್ಗಾಮುಗ್ಗ ಥಳಿಸಿದೆ. ಸುಧೆಮುಗೆರು ನಿವಾಸಿ ಮಹಮ್ಮದ್ ಅಲ್ತಪ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ.
ಮಹಮ್ಮದ್ ಅಲ್ತಪ್ ಹೋಟೆಲ್ ವೊಂದರಲ್ಲಿ ಸಪ್ಲಯರ್ ಆಗಿ ಕೆಲಸ ಮಾಡುತ್ತಿದ್ದ. ವಾರದ ಹಿಂದೆ ಗುರಾಯಿಸಿ ನೋಡಿದ್ದ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ ಎನ್ನಲಾಗಿದೆ. ತಾಂಟ್ ರೇ ಬಾ ತಾಂಟ್ ಎನ್ನುವ ಡೈಲಾಗ್ ಕೂಡ ಬಳಕೆಯಾಗಿದೆ. ಶನಿವಾರ ರಾತ್ರಿ ಅಲ್ತಫ್ ಪಾರ್ಸೆಲ್ ಕೊಟ್ಟು ಬರುವಾಗ ಮಾತಿಗೆ ಮಾತು ಬೆಳೆದಿದ್ದು, ಬಳಿಕ ಯುವಕನಿಗೆ ಅಟ್ಟಾಡಿಸಿಕೊಂಡು ಹಲ್ಲೆ ನಡೆಸಲಾಗಿದೆ.
ಈ ವೇಳೆ ಬೆಳ್ತಂಗಡಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಎಸ್ಐ ನಂದಕುಮಾರ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ.
ಹಲ್ಲೆ ಪ್ರಕರಣ-6 ಮಂದಿಯ ಬಂಧನ
ಉಜಿರೆಯಲ್ಲಿ ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಜಿತ್ ಕುಮಾರ್, ಅರುಣ್ ಕುಮಾರ್, ನಿತೀಶ್, ಆಶಿಶ್ ಕುಮಾರ್, ಪರಮೇಶ್ವರ್, ನವೀನ ಬಂಧಿತ ಆರೋಪಿಗಳಾಗಿದ್ದಾರೆ.