ಕಾಸರಗೋಡು, ಜ.24 (DaijiworldNews/MB) : ನಗರದ ಅಶ್ವಿನಿ ನಗರದಲ್ಲಿ ಗುಂಪೊಂದರ ಥಳಿತಕ್ಕೆ ಬಲಿಯಾದ ಮುಹಮ್ಮದ್ ರಫೀಕ್ರ ಮರಣೋತ್ತರ ಪರೀಕ್ಷಾ ವರದಿ ಲಭಿಸಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿಯಲ್ಲಿ ಉಲ್ಲೇಖಿಸಿದೆ.
ದೇಹದಲ್ಲಿ ಹಲ್ಲೆಯಾದ ಬಗ್ಗೆ ಗಾಯಗಳು ಕಂಡು ಬಂದಿಲ್ಲ. ಕುತ್ತಿಗೆಗೆ ಹಿಡಿದ ಬಗ್ಗೆ ಗುರುತು ಪತ್ತೆಯಾಗಿದ್ದು, ಆದರೆ ಇದು ಸಾವಿಗೆ ಕಾರಣವಲ್ಲ. ಆಂತರಿಕ ಅವಯವಗಳಲ್ಲೂ ಗಾಯ ಪತ್ತೆಯಾಗಿಲ್ಲ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಿದೆ.
ಥಳಿತದ ಪರಿಣಾಮ ಮುಹಮ್ಮದ್ ರಫೀಕ್ ಗೆ ಹೃದಯಾಘಾತವಾಗಿರುವುದಾಗಿ ಅನುಮಾನಿಸಲಾಗಿದೆ.
ರಫೀಕ್ರ ಮೃತದೇಹವನ್ನು ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು.