ನವದೆಹಲಿ, ಜ.24 (DaijiworldNews/MB) : ''ಮೋದಿ ಸರ್ಕಾರವೆಂದರೆ, ಅನರ್ಹತೆ ಮತ್ತು ದುರಹಂಕಾರ'' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಚೀನಾವನ್ನು ಗಡಿಯಲ್ಲೇ ತಡೆಯುವುದು ಸರ್ಕಾರದ ಕೆಲಸ, ದೆಹಲಿಯ ಗಡಿಗಳಲ್ಲಿ ಸತ್ಯಾಗ್ರಹಿ ರೈತರನ್ನು ತಡೆಯುವುದು ಸರ್ಕಾರದ ಕೆಲಸವಲ್ಲ. ಮೋದಿ ಸರ್ಕಾರವೆಂದರೆ, ಅನರ್ಹತೆ ಮತ್ತು ದುರಹಂಕಾರ'' ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತರು ದೆಹಲಿಯ ವಿವಿಧ ಗಡಿಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 11 ಹಂತಗಳಲ್ಲಿ ಮಾತುಕತೆ ನಡೆಸಿದ್ದರೂ ಕೂಡಾ ಎಲ್ಲಾ ಮಾತುಕತೆಗಳು ವಿಫಲವಾಗಿದೆ. ಏತನ್ಮಧ್ಯೆ ರೈತರು ಜನವರಿ 26 ರಂದು ದೆಹಲಿಯ ವಿವಿಧ ಗಡಿಯಿಂದ ಟ್ರಾಕ್ಟರ್ ರ್ಯಾಲಿ ನಡೆಸಲಿದ್ದಾರೆ. ಈ ಗಣರಾಜೋತ್ಸವದ ದಿನದಂದೇ ದೇಶದ ವಿವಿಧ ಭಾಗಗಳಲ್ಲಿ ಪರೇಡ್, ರ್ಯಾಲಿಗಳು ನಡೆಯಲಿದೆ.