ಹೈದರಾಬಾದ್, ಜ.24 (DaijiworldNews/MB) : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಟಾಲಿವುಡ್ನ ಖ್ಯಾತ ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ 30 ಲಕ್ಷ ದೇಣಿಗೆ ನೀಡಿದ್ದಾರೆ.
''ಧರ್ಮ ಹಾಗೂ ತಾಳ್ಮೆಯ ಪ್ರತೀಕ ಶ್ರೀರಾಮ. ನಮಗೆಲ್ಲರಿಗೂ ರಾಮ ಗೈದ ತ್ಯಾಗ ಹಾಗೂ ತೋರಿದ ಧೈರ್ಯ ಸ್ಫೂರ್ತಿ. ಭಾರತದಲ್ಲಿ ಎಲ್ಲರೂ ರಾಮನ ಹಾದಿಯಲ್ಲಿ ನಡೆಯುತ್ತಿದ್ದಾರೆ. ರಾಮ ಮಂದಿರ ನಿರ್ಮಾಣ ನಮ್ಮೆಲ್ಲರ ಹೊಣೆ. ಹಾಗಾಗಿ ರಾಮಮಂದಿರ ನಿರ್ಮಾಣಕ್ಕೆ ನನ್ನ ಕಡೆಯಿಂದ 30 ಲಕ್ಷ ದೇಣಿಗೆ ನೀಡುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.
''ನನ್ನೊಂದಿಗೆ ಕೆಲಸ ಮಾಡುವವರೆಲ್ಲರೂ ಜೊತೆ ಸೇರಿ 11,000 ದೇಣಿಗೆ ಸಂಗ್ರಹಿಸಿದ್ದು ಅವರಲ್ಲಿ ಹಿಂದೂಗಳು ಮಾತ್ರವಿರುವುದಲ್ಲ. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಕೂಡಾ ಇದ್ದಾರೆ'' ಎಂದು ಹೇಳಿದ್ದಾರೆ.